ಬರಗಾಲ ಹಿನ್ನೆಲೆ ಜಿಲ್ಲೆಗಳ ಉಸ್ತುವಾರಿಗೇ ಸಚಿವರ ನೇಮಕ
ಬೆಂಗಳೂರು: ಬರ – ನೆರೆ ತುರ್ತು ಪರಿಶೀಲನೆ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಮುನ್ನವೇ ನೂತನ ಮತ್ತು ಹಳೆಯ ಎಲ್ಲಾ ಸಚಿವರಿಗಳಿಗೂ ಜಿಲ್ಲೆಗಳ ಉತ್ಸುವಾರಿ ನೋಡಿಕೊಂಡು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸ ಮಾಡಿ ಬರ ಮತ್ತು ನೆರೆ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿಯನ್ನು ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸಚಿವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ
ಮಾಗಡಿ ಬಾಲಕೃಷ್ಣ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲೆ ವಹಿಸಿದರೆ ಸಂತೋಷ್ ಲಾಡ್ ಅವರಿಗೆ ಯಥಾ ಸ್ಥಿತಿ ಧಾರವಾಡ ಜಿಲ್ಲೆ ಉಸ್ತುವಾರಿ ವಹಿಸಲಾಗಿದೆ ಯು ಟಿ ಖಾದರ್ ಅವರಿಗೆ ದಕ್ಷಿಣ ಕನ್ನಡದ ಜೊತೆಗೆ ಉಡುಪಿ ಜಿಲ್ಲೆಯನ್ನು ಉಸ್ತುವಾರಿ ವಹಿಸಲಾಗಿದೆ
ಅದರ ಪಟ್ಟಿ ಕೆಳಕಂಡಂತಿದೆ

ನೂತನ ಸಚಿವರನ್ನು ಒಳಗೊಂಡಂತೆ ಒಟ್ಟಾರೆ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಹಳ್ಳಿಗಳಿಗೆ ತೆರಳುವಂತೆ ತಿಳಿಸಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಚಿವರುಗಳಿಗೆ ಖಾತೆ ಹಂಚಿಕೆ ಸಮಯಾವಕಾಶ ದೊರಕಿಸಿಕೊಂಡಂತಾಗಿದೆ

ಇತ್ತ ಸಚಿವಗಿರಿ ಸಿಗದ ಅನೇಕ ಶಾಸಕರುಗಳು ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆ ಮತ್ತು ಅವರವರ ಕ್ಷೇತ್ರಗಳಲ್ಲಿ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ
ಈ ಎಲ್ಲಾ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಅದೇಗೆ ಶಮನ ಮಾಡುತ್ತಾರೋ ಕಾದು ನೋಡಬೇಕಿದೆ

