ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಲವು ದಿನಗಳ ನಂತರ ಖಾತೆ ಹಂಚಿಕೆ ಕೆಲಸ ಮುಗಿಯಿತು
ಹಣಕಾಸು, ಕಾನೂನು ಗುಪ್ತಚರ ಇಲಾಖೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೇರಿದಂತೆ ಹಲವಾರು ಖಾತೆಗಳನ್ನು ಮುಖ್ಯಮಂತ್ರಿ ಡಿಕೆಶಿ ಅವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ

ಮುಂದುವರೆದಂತೆ ಹಿಂದೆ ಕಾರ್ಮಿಕ ಇಲಾಖೆ ನಿರ್ವಹಿಸಿದ್ದ ಸಂತೋಷ್ ಲಾಡ್ ಜಮೀರ್ ಅಹಮದ್ ಸೇರಿದಂತೆ ಹಲವು ಸಚಿವರಿಗೆ ಹಿಂದೆ ನಿಭಾಯಿಸಿದ್ದ ಇಲಾಖೆಯನ್ನೇ ಮತ್ತೊಮ್ಮೆ ನೀಡಲಾಗಿದೆ

ಮಾಗಡಿ ಬಾಲಕೃಷ್ಣ ಅವರಿಗೆ ಪೌರಾಡಳಿತ ಇಲಾಖೆ ಮಳವಳ್ಳಿ ನರೇಂದ್ರ ಸ್ವಾಮಿಯವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ
ನಾಳೆಯಿಂದಲೇ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಬಿಡದಿ ಟೌನ್ ಶಿಪ್ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧಪಕ್ಷವು ಡಿಕೆಸಿ ಸಂಪುಟವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ


