ತುಮಕೂರು ಅಬಕಾರಿ ಡಿಸಿ (ಉಪ ಆಯುಕ್ತರು) ಲೋಕಾಯುಕ್ತ ಬಲೆಗೆ
ವೈನ್ ಟವರಿನ್ ಲೈಸೆನ್ಸ್ ಗಾಗಿ 7 ಲಕ್ಷ ರೂ. ಲಂಚ ಕೇಳಿದ್ದ ತುಮಕೂರು ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬೀಳಿಸಿದ ಜಟ್ಟಿ ಅಗ್ರಹಾರ ನಾಗರಾಜು
ತುಮಕೂರು:
ಸ್ವಂತ ಉದ್ಯೋಗದ ಕನಸು ಹೊತ್ತು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾದ ನಾಗರಾಜುಗೆ ವೈನ್ ಸ್ಟೋರ್ ಪರವಾನಗಿ ನೀಡಲು ಬರೋಬ್ಬರಿ 7 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟ ತುಮಕೂರು ಜಿಲ್ಲಾ ಅಬಕಾರಿ ಉಪ ಆಯುಕ್ತರು (ಡಿಸಿ) ಭರತೇಶ್ ಅವರನ್ನು ಉಪಾಯದಿಂದ ವ್ಯವಸ್ಥಿತವಾಗಿ ಲೋಕಾಯುಕ್ತ ಬಲೆಗೆ ಬೀಳಿಸಿದ್ದಾರೆ
ಪ್ರಕರಣದ ಹಿನ್ನೆಲೆ:
ವೈನ್ ಟಾವೆರಿನ್ ಅಂಗಡಿ ತೆರೆಯಲು ಉದ್ದೇಶಿಸಿದ ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರ ನಾಗರಾಜು ಅದಕ್ಕೆ ಬೇಕಾದ ಕಾನೂನುಬದ್ಧ ಲೈಸೆನ್ಸ್ ಪಡೆಯಲು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಕೆಲಸ ಮಾಡಿಕೊಡಬೇಕಾದ ಅಬಕಾರಿ ಡಿಸಿ ಭರತೇಶ್ ಅವರು ಲೈಸೆನ್ಸ್ ಮಂಜೂರು ಮಾಡಲು ಯುವಕನ ಬಳಿ 7 ಲಕ್ಷ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಹಿಂದೆಯೂ ಅನೇಕ ಅಧಿಕಾರಿಗಳನ್ನು ಲೋಕಾಯುಕ್ತ ಬಲೆಗೆ ಕೆಡವಿ ಹಲವು ಅಧಿಕಾರಿಗಳು ಜೈಲು ಪಾಲು ಮಾಡಿದ್ದ ಜಟ್ಟಿ ಅಗ್ರಹಾರ ನಾಗರಾಜು ದಿಟ್ಟ ಹೆಜ್ಜೆ:
ಸ್ವಂತ ವ್ಯವಹಾರದ ಬದುಕು ನಡೆಸಲು ಹೊರಟ ತನಗೆ ಇಷ್ಟೊಂದು ದೊಡ್ಡ ಮೊತ್ತದ ಲಂಚ ಕೇಳಿದ್ದರಿಂದ ಬೇಸತ್ತ ನಾಗರಾಜು ಭ್ರಷ್ಟಾಚಾರಕ್ಕೆ ಮಣಿಯದೆ ನೇರವಾಗಿ ಲೋಕಾಯುಕ್ತ ಕಚೇರಿಯ ಮೆಟ್ಟಿಲೇರಿ, ಇಲಾಖೆಯ ಭ್ರಷ್ಟ ಅಧಿಕಾರಿ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ
ತಾನು ಉದ್ಯೋಗ ಆರಂಭಿಸುವ ಮುನ್ನವೇ ಲಂಚದ ದಂಧೆಗೆ ಕಡಿವಾಣ ಹಾಕಲು ಯುವಕ ತೋರಿದ ಈ ಧೈರ್ಯ ಮತ್ತು ಪ್ರಜ್ಞಾವಂತಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಲೋಕಾಯುಕ್ತ ಕಾರ್ಯಾಚರಣೆ:
ಯುವಕ ನೀಡಿದ ನಿಖರವಾದ ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ, ತುಮಕೂರಿನಲ್ಲಿ ದಾಳಿ ನಡೆಸಿ ಅಬಕಾರಿ ಡಿಸಿ ಭರತೇಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಮುಂದುವರಿದಿದೆ.
ಆದರೂ ಇನ್ನೂ ಕೂಡ ಅಬಕಾರಿ ಡಿಸಿ ಭರತೇಶ್ ಅವರನ್ನು ಇಲಾಖೆ ಅಮಾನತ್ತು ಪಡಿಸುವುದಾಗಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ
ತುಮಕೂರು ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡತ್ತಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿರ್ದೇಶನ ಬೇಲಿಯ ಎದ್ದು ಹೊಲ ಮೇಯುವ ಪರಿಸ್ಥಿತಿ ತುಮಕೂರು ಜಿಲ್ಲೆಯಲ್ಲಿದೆ ಅನೇಕ ಭ್ರಷ್ಟಾಚಾರಗಳು ಬಯಲಿಗೆ ಬಂದಿದ್ದರು ಸಹ ಯಾವುದೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದಿರುವುದು ತುಮಕೂರು ಜಿಲ್ಲ ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಭ್ರಷ್ಟಾಚಾರಿಗಳಿಗಿದೆ ಎನ್ನುವುದು ಸಂದೇಹವೇ ಇಲ್ಲ ಏಕೆಂದರೆ ಜಿಲ್ಲಾಧಿಕಾರಿಗಳ ತುಮಲು ಸರ್ಕಾರಿ ಭೂ ಅಕ್ರಮದಲ್ಲಿ ಯಾವ ತನಿಖೆಯೂ ನಡೆಯಲಿಲ್ಲ ಭೂಮಿಯು ಸರ್ಕಾರಕ್ಕೆ ವಾಪಸ್ ಪಡೆಯಲಿಲ್ಲ

ಸಚಿವ ಪರಮೇಶ್ವರರವರು ತುಮಕೂರು ಜಿಲ್ಲೆಯ ಜನತಾ ಚರ್ಚೆಯಲ್ಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚವರ ಆಡಳಿತ ಜನತಾ ಪರವಾಗಿಯೋ ಅಥವಾ ಅಧಿಕಾರಿಗಳ ಪರವಾಗಿಯೋ ಎಂಬ ಚರ್ಚೆಗಳು ಜನರ ನಾಲಿಗೆಯಲ್ಲಿ ನಲಿದಾಡುತಿದೆ

