ವಿಷಪೂರಿತ ಹಾವುಗಳ ಕಡಿತದಿಂದ ಪ್ರಾಣ ಹಾನಿ ದೇಶದಲ್ಲಿ ಕರ್ನಾಟಕವೇ ಮೊದಲಸ್ಥಾನ
ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ನಿಂದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪೋರ್ಟಲ್ (IHIP) ಮೂಲಕ ಪಡೆದ ಅಂಕಿ ಅಂಶಗಳ ಆಧಾರದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ 2023 ರಿಂದ 2025 ರವರಿಗೆ ಅಂದರೆ 3ವರ್ಷಗಳಲ್ಲಿ 277 ಜನರು ಕರ್ನಾಟಕದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಹೀಗಾಗಿ
ಕರ್ನಾಟಕವು ದೇಶದಲ್ಲಿ ಸರ್ಪದಂಶದಿಂದ ಸಂಭವಿಸುವ ಸಾವುಗಳಲ್ಲಿ ಅಗ್ರಸ್ಥಾನದಲ್ಲಿದೆ.
ಗ್ರಾಮೀಣ ಭಾಗದ ಜನತೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಕಾರ್ಮಿಕರು ರೈತರು ಮುಖ್ಯ ಬಲಿಪಶುಗಲಾಗಿರುವುದು ವಿಷಾದನೀಯವಾಗಿದ್ದು, ಸಕಾಲಕ್ಕೆ ವಿಷನಿರೋಧಕ ಚುಚ್ಚುಮದ್ದು ಸಿಗದಿರುವುದು ಮತ್ತು ನಾಟಿ ಔಷಧಿಗಳ ಮೊರೆ ಹೋಗುವುದು ಪ್ರಾಣ ಹಾನಿಗೆ ಮುಖ್ಯ ಕಾರಣವಾಗಿದೆ.
ಪ್ರಥಮ ಚಿಕಿತ್ಸೆ ಮತ್ತು ಆಸ್ಪತ್ರೆ ತಲುಪುವ ಬಗ್ಗೆ ಜಾಗೃತಿ ಮೂಡಿಸುವುದು ಇಂದು ತುಂಬಾ ಅತ್ಯವಶ್ಯಕ. ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ (IDSP) ನಿಂದ ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪೋರ್ಟಲ್ (IHIP) ಮೂಲಕ ಪಡೆದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ 2023 ರಲ್ಲಿ 19, 2024 ರಲ್ಲಿ 101 ಮತ್ತು 2025 ರಲ್ಲಿ 157 ಸಾವುಗಳಾಗಿರುವುದನ್ನು ವರದಿ ಮಾಡಿದೆ, ಇದರ ನಂತರ ಪಶ್ಚಿಮ ಬಂಗಾಳ ಎರಡನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ 153 ಸಾವುಗಳು ಸಂಭವಿಸಿದೆ. 2023 ರಲ್ಲಿ 43 ಸಾವುಗಳು ತಮಿಳುನಾಡಿನಲ್ಲಿ ಆಗಿದೆ ಎಂದು ತಿಳಿದು ಬಂದಿದೆ

ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಮಾರ್ಚ್ 21, 2023 ರಂದು ಬಿಡುಗಡೆಯಾದ ಜಾತಿ-ನಿರ್ದಿಷ್ಟ ಮಾರ್ಗಸೂಚಿಗಳನ್ನು ಮತ್ತು ಫೆಬ್ರವರಿ 2021 ರ ಹಿಂದಿನ ಸಲಹೆಯನ್ನು ಸಹ ಇದು ಉಲ್ಲೇಖಿಸಿದೆ, ತುರ್ತಾಗಿ ಸಂಘರ್ಷದ ತಾಣ ಗುರುತು ಮಾಡುವುದು ಹಾಗೂ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಯೋಜಿಸುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವ ಮೂಲಕ ಪ್ರಾಣ ಹಾನಿ ನಿಯಂತ್ರಿಸಲು ಶಿಫಾರಸು ಮಾಡಿದೆ, ಕರ್ನಾಟಕದಲ್ಲಿ ಅರಣ್ಯ ವ್ಯಾಪ್ತಿ ಮತ್ತು ವಿಷಕಾರಿ ಪ್ರಭೇದಗಳ ಸಾಂದ್ರತೆ ಗಣನೀಯವಾಗಿದೆ ಎಂದು ವರದಿಗಳು ಹೇಳಿದೆ

