ಲೋಕಾಯುಕ್ತ ದಾಳಿ – ಲಂಚ ಪಡೆಯುವಾಗ ಅಧಿಕಾರಿ ಬಂಧನ.!
ಹಾಸನ
: ಜಿಲ್ಲೆಯ ಸಕಲೇಶಪುರ ಪಟ್ಟಣದ CDPO ಕಚೇರಿಯಲ್ಲಿ ಗೃಹಲಕ್ಷ್ಮಿ ಬಾಂಡ್ ಪಡೆಯಲು ಅರ್ಜಿದಾರ ಆದರ್ಶ ಇವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್ವೈಸರ್ ಉಮಾದೇವಿ ಅವರನ್ನು ಬಂಧಿಸಿದ್ದಾರೆ
ಆದರ್ಶ ಅವರು ಗೃಹಲಕ್ಷ್ಮಿ ಬಾಂಡ್ ಪಡೆಯಲು CDPO ಕಚೇರಿಗೆ ತೆರಳಿದ್ದ ವೇಳೆ ₹1,100 ಲಂಚಕ್ಕೆ ಬೇಡಿಕೆ ಇಟ್ಟ ಕಾರಣ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬಲೆಗೆ ತಂತ್ರ ರೂಪಿಸಿ ಲಂಚದ ಹಣ ಸ್ವೀಕರಿಸುವಾಗಲೇ ಬಂಧಿಸಿದ್ದಾರೆ
ಈ ಬಗ್ಗೆ ಸಂಪೂರ್ಣವಾಗಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಒಟ್ಟಾರೆ 74 ಫಲಾನುಭವಿಗಳಿಂದಲೂ ಹಣಕ್ಕೆ ಒತ್ತಾಯ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ
ಲೋಕಾಯುಕ್ತ ಇನ್ಸ್ಪೆಕ್ಟರ್ ಶಿಲ್ಪಾ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆದು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

