ಭ್ರಷ್ಟಾಚಾರಿಗಳ, ಮೋಸಗಾರರ, ಲೂಟಿಕೋರರ, ವಂಚಕರ, ಅನ್ಯಾಯ ಎಸಗುವವರ ಮೋಸವನ್ನು ಬಯಲು ಮಾಡುವಲ್ಲಿಯೂ ಪ್ರಮುಖ ಸಾಕ್ಷಿಯಾಗಿ ಸ್ಮಾರ್ಟ್ ಫೋನ್ ಹೊರಹೊಮ್ಮುತ್ತದೆ
ದೇಶದಲ್ಲಿಎಲ್ಲ ಜನರ ಕೈಯಲ್ಲಿಯೂ ಸ್ಮಾರ್ಟ್ ಮೊಬೈಲ್ ಇರುವ ಕಾರಣ, ಅದು ಕೆಲವೊಮ್ಮೆ ಮಿಸ್ಯೂಸ್ ಆಗಬಹುದು
ಪ್ರಸ್ತುತ ಪರಿಸ್ಥಿತಿಯಲ್ಲಿ ಪೊಲೀಸರು ಮಾಡುವ ಅನ್ಯಾಯವನ್ನು ಜನರು ವಿಡಿಯೋ ಮಾಡುವುದೇ ತಪ್ಪು ಎನ್ನುವಂತೆ ಹೈಕೋರ್ಟ್ನಲ್ಲಿ ವಾದ ಮಾಡಿ, ನ್ಯಾಯಮೂರ್ತಿಗಳಿಂದ ಸರ್ಕಾರ ಉಗಿಸಿಕೊಂಡಿರುವ ಕುತೂಹಲದ ಘಟನೆಯೊಂದು ಹೈಕೋರ್ಟ್ನಲ್ಲಿ ನಡೆದಿದೆ.
ತೀವ್ರ ತರಾಟೆಗೆ ತೆಗೆದುಕೊಂಡು ಸರ್ಕಾರದ ಬೆವರಿಳಿಸಿದ ಹೈಕೋರ್ಟ್
ಗುಜರಾತ್ ಹೈಕೋರ್ಟ್ನಲ್ಲಿ ಇಂತಹ ವಾದಗಳು ನಡೆದಿದ್ದು ಕೋರ್ಟ್ ಕಲಾಪದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಠಾಣೆಯೊಳಗೆ ನಾಗರಿಕರು ವಿಡಿಯೋಗ್ರಫಿ ಮಾಡುವುದನ್ನು ನಿಷೇಧಿಸಿದ್ದಕ್ಕಾಗಿ ಪೊಲೀಸರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಜನರು ಹೀಗೆ ಮಾಡುವುದು ಸರಿಯಲ್ಲ, ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಇರುವಾಗ, ಜನರು ಪೊಲೀಸ್ ಠಾಣೆ ಒಳಗೆ ವಿಡಿಯೋ ಮಾಡುವುದು ಕಾನೂನು ಉಲ್ಲಂಘನೆ ಎಂದು ಸರ್ಕಾರ ಪರ ವಕೀಲರು ವಾದಿಸಿದರು ಅವರಿಗೆ ವಿಡಿಯೋ ಮಾಡುವ ಅಧಿಕಾರ ಇಲ್ಲ ಎಂದು ವಾದಿಸಿದ್ದ ಸರ್ಕಾರಿ ವಕೀಲರಿಗೆ ಕೋರ್ಟ್ ಬೆವರಿಳಿಸಿದೆ.
ಪೊಲೀಸ್ ಠಾಣೆಗಳಲ್ಲಿ ಎಷ್ಟು ಸಿಸಿಟಿವಿಗಳು ಕೆಲಸ ಮಾಡುತ್ತಿವೆ..? ಸರಿ, ನಿಮ್ಮ ವಾದವನ್ನು ಒಪ್ಪೋಣ, ಮೊದಲು ಹಾಗೆಂದು ಯಾವ ಕಾಯ್ದೆ, ಯಾವ ಸೆಕ್ಷನ್ ಹೇಳುತ್ತದೆ ಎಂದು ಪ್ರಶ್ನಿಸಿದಾಗ ವಕೀಲರು ಕಕ್ಕಾಬಿಕ್ಕಿಯಾದರು. ಸಿಸಿಟಿವಿ ಎಲ್ಲಾ ಇರುತ್ತದೆ, ವಿಡಿಯೋ ಯಾಕೆ ಎಂದು ಅವರು ಪ್ರಶ್ನಿಸಿದಾಗ, ಸರ್ಕಾರಗಳ ಎಷ್ಟು ಸಿಸಿಟಿವಿ ಕೆಲಸ ಮಾಡುತ್ತದೆ ಎನ್ನುವುದು ನಮಗೆ ಗೊತ್ತಿದೆ. ಶೇಕಡಾ 80 ರಷ್ಟು ಸಿಸಿಟಿವಿ ಕೆಲಸವೇ ಮಾಡುವುದಿಲ್ಲ.
ಹೀಗಿರುವಾಗ ಸಾಕ್ಷಿಗಾಗಿ ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ನೀವು (ಪೊಲೀಸರು) ಏನು ಬೇಕಾದರೂ ಅನ್ಯಾಯ ಮಾಡಬಹುದು, ಅದನ್ನು ಜನರು ಪ್ರಶ್ನಿಸಬಾರದೇ, ಇದು ಯಾವ ಕಾನೂನಿನಲ್ಲಿ ಇದೆ ಎಂದು ತೋರಿಸಿ ಎಂದಾಗ ಉತ್ತರಿಸಲಾಗದೇ ಸರ್ಕಾರಿ ವಕೀಲೆ ಮೌನಕ್ಕೆ ಶರಣಾದರು..
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶದಾದ್ಯಂತ ಜನರು ಎಚ್ಚೆತ್ತುಕೊಂಡು ತಮ್ಮ ತಮ್ಮ ಸಾಕ್ಷಿಗಳನ್ನು ತಾವೇ ಸೃಷ್ಟಿಸಿಕೊಳ್ಳಲು ತಯಾರಾಗಿದ್ದಾರೆ
ಈ ಹಿಂದೆ ಬಾಂಬೆ ಹೈಕೋರ್ಟ್ ಕೂಡ ಪೊಲೀಸ್ ಠಾಣೆಗೂ ನಿಷೇಧಿತ ಪ್ರದೇಶವಲ್ಲ ಅದು ಕೂಡ ಸಾರ್ವಜನಿಕ ಸ್ಥಳವಾದ್ದರಿಂದ ವಿಡಿಯೋ ಮಾಡುವುದು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು

