ಇದೇ ಏಪ್ರಿಲ್ ನಲ್ಲಿ ಸರ್ಕಾರದಿಂದ ಆಚರಿಸಲಾಗುತ್ತಿರುವ ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಮಾದಿಗ ಸಮುದಾಯದ ಮುಖಂಡರು ನಿರ್ಧರಿಸಿರುವುದಾಗಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಕಳೆದ 35 ವರ್ಷಗಳಿಂದ ದಲಿತಪರ ಸಂಘಟನೆಗಳು ಹಾಗೂ ಮಾದಿಗ ಪರ ಸಂಘಟನೆಗಳು ಒಳ ಮೀಸಲಾತಿ ಜಾರಿಗಾಗಿ ಚಳುವಳಿ ಹೋರಾಟ ಮೂಲಕ ಆಗ್ರಹ ಪಡಿಸಿಕೊಂಡು ಬಂದಿರುವುದನ್ನು ಗಮನಿಸಿದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರುವ ಮುನ್ನ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು

ಆದರೆ ಇದುವರೆಗೂ ಒಳ ಮೀಸಲಾತಿ ಜಾರಿಗೊಳಿಸದೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಆದ್ದರಿಂದ ಈ ಸರ್ಕಾರದ ನಡೆಯನ್ನು ಕುಣಿಗಲ್ ತಾಲೂಕು ಮಾದಿಗ ಪರ ಸಂಘಟನೆಗಳು ಹಾಗೂ ಅದರ ಒಕ್ಕೂಟಗಳು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೋರಾಟಗಾರರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೈಎಚ್ ಹುಚ್ಚಯ್ಯ ಶಿವಶಂಕರ್ ಪುರಸಭಾ ಮಾಜಿ ಉಪಾಧ್ಯಕ್ಷರು ಹಾಗೂ ತಾಲೂಕು ಮಾಧಾರ ಮಹಾಸಭಾ ಸಂಘಟನೆಗಳ ಒಕ್ಕೂಟ ತಾಲೂಕು ಅಧ್ಯಕ್ಷರಾದ ಶ್ರೀನಿವಾಸ್ ನರಸಿಂಹಮೂರ್ತಿ ಪತ್ರಕರ್ತರಾದ ರಾಮಚಂದ್ರಯ್ಯ ಮತ್ತು ಕೆ ಆರ್ ರಂಗನಾಥ್ ಅವರು ಉಪಸ್ಥಿತರಿದ್ದರು

