ಕೋಲಾರ ಶ್ರೀನಿವಾಸಪುರ
ಕಾರ್ಯನಿರ್ವಹಣಾಧಿಕಾರಿಗಳು ಮತ್ತು ZP- CEO ಅವರ ಸೂಚನೆಗೂ ಕಿಮ್ಮತ್ತು ನೀಡದ PDO ವಿರುದ್ಧ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪದಾಧಿಕಾರಿಗಳ ಆಕ್ರೋಶ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಪಂಚಾಯತಿಗೆ ಸೇರಿದ ಗುಮ್ಮರಟ್ಟಿಪುರ ಗ್ರಾಮದ ಖಾತ ನಂಬರ್ 149 (ಲಕ್ಷ್ಮಮ್ಮ ಕೋಂ ಕೃಷ್ಣಪ್ಪ) ರವರ ಸ್ವತ್ತನ್ನು ಅಲ್ಲಿನ ಪಿಡಿಒ ರವರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಇ-ಸ್ವತ್ತನ್ನು ಮಾಡಿಕೊಟ್ಟಿರುವುದಿಲ್ಲ, ಸುಮಾರು ಎರೆಡು ವರ್ಷದಲ್ಲಿ ನಾಲ್ಕು ಬಾರಿ ಅರ್ಜಿ ಯನ್ನು ನೀಡಿರುತ್ತಾರೆ ಆದರೂ ಸಹ ಪಿಡಿಒ ರವರು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ, ಈ ಸಂಬಂಧ ರೋಸಿ ಹೋಗಿರುವ ಫಲಾನುಭವಿಗಳು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ, ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಮಿತಿವತಿಯಿಂದ ದಳಸನೂರು ಪಂಚಾಯತಿಗೆ ಭೇಟಿ ನೀಡಿದಾಗ ಪಿಡಿಒ ಹಾಗೂ ಸಿಬ್ಬಂದಿ ಗಳ ಆಡಳಿತ ವೈಫಲ್ಯ ಕಣ್ಣಾರೆ ಕಂಡು ಆಶ್ಚರ್ಯಚಕಿತರಾಗಿದ್ದರೆ

ಈ ಪಂಚಾಯಿತಿಗೆ ಹನ್ನೊಂದು ಗ್ರಾಮಗಳು ಸೇರಿದ್ದು, ಗ್ರಾಮಗಳಿಗೆ ಸೇರಿದ ಡಿಮ್ಯಾಂಡ್ ಪುಸ್ತಕಗಳನ್ನು ಒಳಗೊಂಡಂತೆ ಯಾವುದೇ ಕಡತಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಿಯಮಾನುಸಾರ ಮಾಡಿರುವುದಿಲ್ಲ ಹಾಗೂ ಡಿಮ್ಯಾಂಡ್ ಪುಸ್ತಕಗಳೇ ಇರುವುದಿಲ್ಲ ಅವುಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿರುತ್ತವೆ. ಮತ್ತು
ಈ ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ವಾರಸುದಾರರ ಖಾತೆಗಳು ಅದಲು ಬದಲು ಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತವೆ, ಇವನ್ನೆಲ್ಲಾ ನೋಡಿದ ಸಂಘಟನೆಯ ಪದಾಧಿಕಾರಿಗಳು ಪಂಚಾಯಿತಿ ಪಿಡಿಓ ರವರನ್ನು ಪ್ರಶ್ನಿಸಿದಾಗ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ
ಸದರಿ ದೂರುದಾರರಾದ ಲಕ್ಷ್ಮಮ್ಮ ಕೋಂ ಕೃಷ್ಣಪ್ಪ ರವರು ಸುಮಾರು ವರ್ಷಗಳಿಂದ ಅದೇ ಗ್ರಾಮದ ವಾಸಿಯಾಗಿದ್ದು ಸದರಿ ಆಸ್ತಿಯ ಸ್ವಾಧೀನದಲ್ಲಿರುತ್ತಾರೆ, ಅಲ್ಲದೆ ಅವರಿಗೆ ಸೇರಿದ 149 ಖಾತ ನಂಬರಿಗೆ ಅವರಿಂದ 3500/- ಕಂದಾಯವನ್ನು ಸಹ ಕಟ್ಟಿಸಿಕೊಂಡು ಅವರ ಆಸ್ತಿಯನ್ನು ಬೇರೆಯವರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿರುತ್ತಾರೆ.
ಅದೇ ರೀತಿ ಪಿಡಿಒ ರವರು ಸಿಬ್ಬಂದಿಯ ಕೊರತೆಯ ನೆಪ ವೊಡ್ಡಿ ಪಂಚಾಯತಿ ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ವಿಳಂಬ ಮಾಡಿರುತ್ತಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ
ಈ ಹಿಂದೆ ಪಿಡಿಓ ರವರಿಗೆ ಸಾಕಷ್ಟು ಬಾರಿ ಮೇಲಾಧಿಕಾರಿಗಳು ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಕಾರ್ಯಾ ನಿರ್ವಾಣಧಿಕಾರಿಗಳು ಹಾಗೂ ಕೋಲಾರ ಜಿಲ್ಲಾ ಪಂಚಾಯಿತಿ CEO ರವರು ನಿರ್ದೇಶನಗಳನ್ನು ನೀಡಲಾಗಿದ್ದರೂ ಸಹ ಅವರ ಸೂಚನೆಗಳಿಗೂ ಕಿಮ್ಮತ್ತು ನೀಡದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ
ತಮ್ಮ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ನಮ್ಮ ಸಂಘಟನೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರು ಆದ ಜೆ.ಸೋಮಸುಂದರ ರೆಡ್ಡಿ, ಜಿಲ್ಲಾಧ್ಯಕ್ಷರು ಆದ ರವಿಕುಮಾರ್ ಹೆಚ್, ಜಿಲ್ಲಾ ಉಪಾಧ್ಯಕ್ಷರು ಆದ ರಾಮಾಂಜಪ್ಪ ಬಿ. ಪ್ರದಾನ ಕಾರ್ಯದರ್ಶಿಗಳು ಆದ ಆಂಜಿನಪ್ಪ ಎಸ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷರು ಆದ ತ್ರಿಲೋಕ್, ತಾಲ್ಲೂಕು ಸಂಚಾಲಕರಾದ ಅಶೋಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

