ಕುಣಿಗಲ್ ; ಮೂರು ದಿನಗಳ ಕುಣಿಗಲ್ ಉತ್ಸವ ಕಾರ್ಯಕ್ರಮದಲ್ಲಿ ಮೊದಲ ದಿನ ತಾಲೂಕಿನಾದ್ಯಂತ ಇರುವ ನೂರಾರು ದೇವರುಗಳ ಒಂದೆಡೆ ಸೇರಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಿಸಿದ್ದು ಇತಿಹಾಸ ಸೃಷ್ಟಿಯಾದರೆ
ಎರಡನೇ ದಿನ ಎಲ್ಲ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ವಾಚ್ ಐರನ್ ಬಾಕ್ಸ್ ಸೇರಿದಂತೆ ವಿವಿಧ ಗಿಫ್ಟ್ ಗಳು ನೀಡಿದ್ದು ಶಾಲಾ ಮಕ್ಕಳ ಜೊತೆ ಪೋಷಕರು ಬಂದು ಜಮಾಯಿಸಿದ್ದರು
ಸಂಜೆಗೆ ತಿರುಪತಿಯಿಂದ ಕರೆ ತಂದ ವೆಂಕಟೇಶ್ವರ ಮೂರ್ತಿ ಮತ್ತು ವೈದಿಕರಿಂದ ಆಯೋಜನೆಗೊಂಡ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಅಂತೂ ಪಕ್ಷಾತೀತವಾಗಿ ಕುಟುಂಬ ಸಮೇತ ಭಾಗವಹಿಸಿ ಭಕ್ತಿಪರವಶರಾದರು
ಶ್ರೀನಿವಾಸ ಕಲ್ಯಾಣೋತ್ಸವ ಸಮಯಕ್ಕೆ ಸರಿಯಾಗಿ ವರುಣನೂ ಆಗಮಿಸಿ ಜನರನ್ನು ಹರಿಸಿದನು ಎನ್ನುವಂತೆ ಜನ ಪುಷ್ಟೀಕರಿಸಿದರು ಜಿಕೆಬಿಎಮೆಸ್ ಶಾಲಾ ಮೈದಾನದಲ್ಲಿ ಜನವೋಜನ… ಈ ಸಮಾರಂಭದಲ್ಲಿ ಡಿ ಕೆ ಸುರೇಶ್ ಟಿ ಬಿ ಜಯಚಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು

ಡಾಕ್ಟರ್ ರಂಗನಾಥ್ ಮತ್ತು ಕುಟುಂಬ ಅವರು DKS ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಅಮೋಘವಾದುದು ಕೋಟಿಗಟ್ಟಲೆ ಹಣ ಖರ್ಚಾಗುವಂತದ್ದು ಇಂತಹ ಕಾರ್ಯಕ್ರಮ ಹಿಂದೆಯೂ ನಡೆದಿಲ್ಲ ಈ ರೀತಿಯಾಗಿ ಖರ್ಚು ಮಾಡಲು ವಿರೋಧಿ ಪಕ್ಷಗಳಿಗೆ ಧೈರ್ಯವಿಲ್ಲ ಎಂಬುದು ಜನಗಳ ನಾಲಿಗೆಯಲ್ಲಿ ಉದುರುತ್ತಿರುವ ನುಡಿಮುತ್ತುಗಳು
ಇದೊಂದು ಧಾರ್ಮಿಕ, ಕ್ರೀಡಾ ಮನೋಭಾವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವೇ ಆದರೂ ಸಹ ಪರೋಕ್ಷವಾಗಿ ರಾಜಕೀಯ ಶಕ್ತಿ ನಿರಂತರವಾಗಿ ಉಳಿಸಿಕೊಳ್ಳುವ ಕಾರ್ಯಕ್ರಮ ಎಂಬುದು ಗುಟ್ಟೇನಲ್ಲಾ ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಲ್ಲಿ ಗೊಂದಲವಾದ ವಾತಾವರಣ ಸೃಷ್ಟಿಯಾಗಿರುವುದಂತೂ ನಿಜ

ಮನೆ ಮನೆಗೆ ತಿರುಪತಿ ಲಡ್ಡು ವಿತರಣೆ ಕೂಡ ನಡೆಯಲಿದ್ದು ರಂಗೋಲಿ ಬಹುಮಾನ ಹೆಸರಿನಲ್ಲಿ ಅಡುಗೆ ಪಾತ್ರೆಗಳು ಮನೆ ಸೇರಿವೆ ಮಕ್ಕಳ ಕೈಗೆ ಗಿಫ್ಟ್ ಸೇರಿವೆ ಇನ್ನೂ ಏನೇನು ಗಿಫ್ಟ್ ಗಳು ಜನರ ಕೈ ಸೇರಲಿವೆಯೋ… ನಿಗೂಢವಾಗಿದೆ
ಇನ್ನೂ ಪಟ್ಟಣದಲ್ಲಿ ಸುಸಜ್ಜಿತ ಖಾಸಗಿ ಬಸ್ ಸ್ಟ್ಯಾಂಡ್ ಕೆ ಆರ್ ಎಸ್ ಅಗ್ರಹಾರದಿಂದ ಬಿಳಿದೇವಾಲಯ ಮೂಲಕ ವಿಶಾಲ ರಸ್ತೆ ಸೇರಿದಂತೆ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಲಿವೆ

