ಕೋಲಾರ:
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಕೋಲಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ದುರಾಡಳಿತ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಿಗೆ ಮನವಿ ದೂರು ಸಲ್ಲಿಸಲಾಯಿತು.
ಕ್ಯಾಸಂಬಳ್ಳಿ ಗ್ರಾಮದಲ್ಲಿ ಸರ್ಕಾರಿ ಪಿ.ಯು.ಸಿ ಹಾಗೂ ಪದವಿ ಕಾಲೇಜಿನ ಕೊರತೆಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಉಂಟಾಗುತ್ತಿರುವುದು, ಶಿಕ್ಷಣಕ್ಕೆ ಮಂಜೂರಾದ ಜಮೀನಿನಲ್ಲಿ ನರೇಗಾ ಕಾಮಗಾರಿಗಳ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರ, ನಿರ್ಗತಿಕ ಮೂಕ ಕುಟುಂಬಕ್ಕೆ ವಸತಿ ಸೇರಿದಂತೆ ಶಾಶ್ವತ ಪರಿಹಾರ ನೀಡದಿರುವುದು, ಕೆಜಿಎಫ್ ತಾಲ್ಲೂಕಿನ ಜಕ್ಕರಸನ ಕುಪ್ಪ ಗ್ರಾಮದ ಕೆರೆ ಒತ್ತುವರಿ, ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಇ-ಸ್ವತ್ತು ವಿಳಂಬ ಮತ್ತು ವ್ಯಾಪಕ ಭ್ರಷ್ಟಾಚಾರ ಪ್ರಮುಖ ಅಹವಾಲುಗಳಾಗಿವೆ ಎಂದು ವೇದಿಕೆಯ ಕಾರ್ಯಕರ್ತರು ದೂರಿದರು
ಈ ಎಲ್ಲಾ ಪ್ರಕರಣಗಳ ಕುರಿತು ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಒತ್ತಾಯಿಸಿದೆ. ಈ ಸಂದರ್ಭದಲ್ಲಿ
ಜಿಲ್ಲಾ ಗೌರವಾಧ್ಯಕ್ಷ ಸೋಮ ಸುಂದರ್ ರೆಡ್ಡಿ, ಬಂಗವಾದಿ ನಾರಾಯಣಪ್ಪ,
ಜಿಲ್ಲಾಧ್ಯಕ್ಷ ರವಿಕುಮಾರ್ ಹೆಚ್, ಉಪಾಧ್ಯಕ್ಷ ರಾಮಾಂಜಿನಪ್ಪ,
ಪ್ರಧಾನ ಕಾರ್ಯದರ್ಶಿ ರವಿ ಜಿಎಂ, ಯಾದವ್ ರೆಡ್ಡಿ, ಕೃಷ್ಣ ರೆಡ್ಡಿ ಜಯರಾಮ್ ರೆಡ್ಡಿ, ಮುನಿರತ್ನಪ್ಪ ಕಾರ್ಯಕರ್ತರು ಇದ್ದರು


