ತಮಿಳುನಾಡು:
ತಮಿಳುನಾಡಿನ ತೂತುಕುಡಿಯ ಶಾಂತನ್ಕುಲಂನಲ್ಲಿ ಪೊಲೀಸ್ ಠಾಣೆಯ ಕಷ್ಟಡಿಯಲ್ಲಿದ್ದಾಗಲೇ ಮನಸೋ ಇಚ್ಛೆ ಥಳಿಸಿದ್ದ ಪೊಲೀಸರು
ಪೊಲೀಸ್ ಠಾಣೆಯಲ್ಲೆಲ್ಲಾ ರಕ್ತ ಹರಡಿತ್ತು
ಅವರ ರಕ್ತವನ್ನು ಅವರ ಬಟ್ಟೆಯಿಂದಲೇ ತೊಳಿಸಲಾಗಿತ್ತು…
ಜೈರಾಜ್ ಮತ್ತು ಅವರ ಪುತ್ರ ಬೆನಿಕ್ಸ್ ಪೊಲೀಸರ ಚಿತ್ರ ಹಿಂಸೆಗೆ ಒಳಗಾಗಿದ್ದರು
ತುಂಬಾ ಸೀರಿಯಸ್ ಆದ ನಂತರ ಆಸ್ಪತ್ರೆಗೆ ಪೊಲೀಸರೇ ದಾಖಲಿಸಿದ್ದರು
ಬಳಿಕ ಆಸ್ಪತ್ರೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದರು
ತಮ್ಮದೇ ಅಂಗಡಿಯಲ್ಲಿ ಮೊಬೈಲ್ ವ್ಯಾಪಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವದಿ ಮೀರಿ ವ್ಯಾಪಾರ ನಡೆಸುತ್ತಿದ್ದರಿಂದ ಬಂಧಿಸಲಾಗಿತ್ತು
ಮೂರು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಲಾಗಿತ್ತು
ಬಳಿಕ ಸಿಸಿಟಿವಿಯ ಎಲ್ಲಾ ಪೂಟೆಜ್ ಗಳನ್ನು ಅಳಿಸಿ ಹಾಕಲಾಗಿತ್ತು
ವ್ಯಾಪಕವಾಗಿ ಕಿಚ್ಚು ಹರಡಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು
ಇದೀಗ ಅವರ ಸಾವಿಗೆ ನ್ಯಾಯ ದೊರಕುವಂತೆ ಮಾಡಿದೆ ಮಧುರೈ ನ್ಯಾಯಾಲಯ
ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಸೇರಿಸಿ ಒಟ್ಟಾರೆ ಭಾಗಿಯಾಗಿದ್ದ 9 ಪೊಲೀಸರನ್ನು ಮರಣದಂಡನೆಗೆ ಗುರಿಪಡಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸಿ ಕೊಟ್ಟಿದೆ….

