ತುಮಕೂರು
ಜಿಲ್ಲೆಯ ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನಯ್ಯ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮಲ್ಲಿಕಾರ್ಜುನಯ್ಯ ಪಾವಗಡ ತಾಲ್ಲೂಕಿನ ಗುಂಡಾರ್ಲಹಳ್ಳಿಯ ಮೂಲದವರು ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು ತಮ್ಮ ಮೇಲಧಿಕಾರಿ ಜಂಟಿ ನಿರ್ದೇಶಕ ಕೃಷ್ಣಪ್ಪ ಕಿರುಕುಳ ನೀಡಿರೋದಾಗಿ ಹೇಳಿದ್ದಾರೆ

ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ತಮ್ಮ ಮೇಲಿನ ಅಧಿಕಾರಿ ಜಂಟಿ ನಿರ್ದೇಶಕ ಕೃಷ್ಣಪ್ಪ ವಿರುದ್ಧ ಆರೋಪ ಮಾಡಿದ್ದು ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಒಳ್ಳೆಯ ಬೆಲೆ ನೀಡಿದ್ದಾರೆ. ನಾನು ಕೂಡ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಸಹಾಯ ಮಾಡಬೇಕಿತ್ತು. ಆದರೆ, ಸಹಾಯ ಮಾಡಲಾಗುತ್ತಿಲ್ಲ. ಮೇಲಧಿಕಾರಿ ನೀಡಿದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಕುಟುಂಬ ಅವರ ಮೇಲೆ ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ದೇವರು ಹಾಗೂ ಕಾನೂನು ಶಿಕ್ಷೆ ನೀಡಲಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ನೋವು ತೋಡಿಕೊಂಡ ಪೋಷಕರು: ಮಗನ ಸಾವಿನ ಬಗ್ಗೆ ತಾಯಿ ಕೆಂಚಮ್ಮ ಮಾತನಾಡಿ ಮಲ್ಲಿಕಾರ್ಜುನಯ್ಯ ನನ್ನ ಎರಡನೇ ಮಗ. ನನಗೆ ಐದು ಮಕ್ಕಳು. ಊಟಕ್ಕೆ ಬರುವಂತೆ ಫೋನ್ ಮಾಡಿ ಮಾಡಿ ಸಾಕಾಯ್ತು ಎಷ್ಟು ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಅನುಮಾನ ಬಂದು ಸಂಬಂಧಿಕರುಗಳಿಗೆ, ಅವರಿವರಿಗೆ ಫೋನ್ ಮಾಡಿ ಕೇಳಿದೆವು ಎಲ್ಲರೂ ನೋಡಿಲ್ಲ, ಇಲ್ಲಿಗೆ ಅವರು ಬಂದಿಲ್ಲ ಎಂದೇ ಹೇಳಿದರು. ಕೊನೆಗೆ ಕಚೇರಿಯಲ್ಲಿ ಹುಡುಕಲು ತೆರಳಿದೆವು. ಅಲ್ಲಿ ನೋಡಿದಾಗ ಬಾಗಿಲು ಹಾಕಿಕೊಂಡಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ
ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ
ತುಮಕೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿರುವುದಾಗಿ ಅನೇಕ ಸಾಮಾಜಿಕ ಹೋರಾಟಗಾರರು ಪತ್ರಕರ್ತರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಕರ್ತವ್ಯದ ಬಗ್ಗೆ ಹಾಗೂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರ ಸಾವಿನ ಹಿನ್ನೆಲೆಯನ್ನು ಅರಿತು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಈ ಕ್ಷಣದಿಂದಲೇ ಪಾರದರ್ಶಕ ತನಿಖೆಗಾಗಿ ಕೃಷ್ಣಪ್ಪ ಅವರನ್ನು ಅಮಾನತು ಪಡಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ…

