ಮೈಸೂರು/ಹುಣಸೂರು
ತನ್ನ ಅಧೀನ ಸಿಬ್ಬಂದಿಯಿಂದಲೇ 25 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಲಾಕ್ ಆದ ಪಿಡಿಓ ತಕ್ಷಣ ಕೈ ಕೊಯ್ದುಕೊಂಡ ಘಟನೆ ಹುಣಸೂರು ತಾಲೂಕಿನಲ್ಲಿ ಇಂದು ನಡೆದಿದೆ
ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ ಪಿಡಿಓ ಮಂಜುಳಾ ಲೋಕಾಯುಕ್ತಕ್ಕೆ ಲಾಕ್ ಆದ ಅಧಿಕಾರಿ
25 ಸಾವಿರ ಲಂಚ ಪಡೆದು ಕಚೇರಿಯಲ್ಲೇ ವಾಟರ್ ಮ್ಯಾನ್ ನಿಂದ ಲಂಚದ ಹಣ ಪಡೆಯುವಾಗ PDO ಮಂಜುಳಾ ಅವರನ್ನು ಬಂಧಿಸಿದ್ದಾರೆ

ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸ್ವಾಮಿ ಎಂಬುವರು ಕರ್ತವ್ಯನಿರತರಾಗಿದ್ದಾಗಲೇ ಮೃತಪಟ್ಟಿದ್ದಾರೆ ಅನುಕಂಪದ ಆಧಾರದ ಮೇಲೆ ಸ್ವಾಮಿ ರವರ ಮಗ ಮಹದೇವ್ ಎಂಬುವರಿಗೆ ಕೆಲಸ ಸಿಕ್ಕಿದೆ ತನ್ನ ತಂದೆ ಮಾಡಿದ್ದ ಕೆಲಸದ ಎರಡು ವರ್ಷದ ಬಾಕಿ ಸಂಬಳ ನಾಲ್ಕು ಲಕ್ಷ ಸಂಬಳ ಪಡೆಯಲು ಮಹದೇವ್ ಮುಂದಾಗಿದ್ದಾರೆ ಈ ಸಂದರ್ಭದಲ್ಲೇ ಪಿಡಿಒ ಮಂಜುಳ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಇದರಿಂದ ಬೇಸತ್ತ ಮಹಾದೇವ ದಾಖಲೆ ಸಮೇತ ಲೋಕಾಯುಕ್ತ ಮೊರೆ ಹೋಗಿದ್ದಾರೆ ಹೀಗಾಗಿ ಮಹಾದೇವ ಜೊತೆ ಯೋಜನೆ ರೂಪಿಸಿದ ಲೋಕಾಯುಕ್ತ ಅಧಿಕಾರಿಗಳು 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ ಈ ವೇಳೆ ಜೈಲು ತಪ್ಪಿಸಿಕೊಳ್ಳಲು ಪಿಡಿಒ ಮಂಜುಳಾ ಪ್ಲಾನ್ ಮಾಡಿ ತನ್ನ ಕೈಯನ್ನ ಹರಿತವಾದ ಆಯುಧದಿಂದ ಕೊಯ್ದುಕೊಂಡಿದ್ದಾರೆಂದು ತಿಳಿದುಬಂದಿದೆ ಗಾಯಗೊಂಡ ಮಂಜುಳಾರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು ನಂತರ ಮುಳ್ಳೂರು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ತನಿಖೆ ಮುಂದುವರಿದಿದೆ


