ಮಾಹಿತಿ ಹಕ್ಕು ಕಾಯ್ದೆ ಮುಖಾಂತರ ಹೋರಾಟದಲ್ಲಿ ನ್ಯಾಯಾಧೀಶರೊಬ್ಬರು ಅಮಾನತ್ತಾಗುವುದು ದೇಶದಲ್ಲಿ ಮೊದಲನೇ ಪ್ರಕರಣ
ಭೀಮಪ್ಪ ಗಡಾದ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ಬೃಹತ್ ಭೂಕಬಳಿಕೆ ಹಗರಣವನ್ನು ತಮ್ಮ ಮಾಹಿತಿ ಹಕ್ಕು (RTI) ಕಾಯ್ದೆಯಡಿ ದಾಖಲೆಗಳನ್ನು ತೆಗೆದು ಹೋರಾಟದ ಮೂಲಕ ಬೆಳಕಿಗೆ ತಂದು ಸರ್ಕಾರಕ್ಕೆ ಆಸ್ತಿ ಉಳಿಸುವಲ್ಲಿ ಯಶಸ್ವಿಯಾದ ಪ್ರಮುಖ ಬಲಶಾಲಿ ಮಾಹಿತಿ ಹಕ್ಕು ಹೋರಾಟಗಾರರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : ನಸಲಾಪುರ ಗ್ರಾಮದಲ್ಲಿ ಬರುವ ಸುಮಾರು 160 ಎಕರೆ ಬೆಲೆಬಾಳುವ ಸರ್ಕಾರಿ ಜಮೀನನ್ನು (ಗಾಯರಾಣ ಹಾಗೂ ಹುಲ್ಲುಬನ್ನಿ ಜಮೀನು) ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಕಬಳಿಸಿದ್ದರು ಇದರ ಮಾಹಿತಿ ತಿಳಿದುಕೊಂಡ ಭೀಮಪ್ಪ ಗಡಾದ ಅವರು
ಆರ್.ಟಿ.ಐ ಅಡಿಯಲ್ಲಿ ನಸಲಾಪುರ ಗ್ರಾಮದ ಜಮೀನಿನ ನೂರಾರು ವರ್ಷಗಳ ಕಂದಾಯ ದಾಖಲೆಗಳು, ಆಕಾರ್ಬಂದ್ ಮತ್ತು ಮ್ಯುಟೇಷನ್ ಪ್ರತಿಗಳನ್ನು ಸಂಗ್ರಹಿಸಿ, ಸರ್ಕಾರದ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಿರುವುದನ್ನು ಸಾಕ್ಷಿ ಸಮೇತ ಕಂಡುಕೊಂಡು ಬಹಿರಂಗಪಡಿಸಿದರು.
ಸಿವಿಲ್ ನ್ಯಾಯಾಧೀಶರ ಅಮಾನತು : ಈ ಅಕ್ರಮ ಜಮೀನು ವರ್ಗಾವಣೆ ಮತ್ತು ಪ್ರಕರಣವನ್ನು ನ್ಯಾಯಾಲಯದ ಕಟಕಟೆಯ ವಿಚಾರಣೆಯಲ್ಲಿ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟ ಕಾರಣ ಪ್ರಕರಣವನ್ನು ಕೈ ಬಿಡದೆ ಹೈಕೋರ್ಟ್ ವರೆಗೆ ಮತ್ತಿತರ ಮೇಲಿನ ಪ್ರಾಧಿಕಾರಗಳಿಗೆ ತೆಗೆದುಕೊಂಡು ಹೋದರು ಅಲ್ಲಿ ವಾದ ವಿವಾದಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿಗಳು ಕೆಳಗಿನ ಸಿವಿಲ್ ನ್ಯಾಯಾಧೀಶರು ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂಬ ಆರೋಪದ ಮೇಲೆ, ಸಂಬಂಧಪಟ್ಟ ಸಿವಿಲ್ ನ್ಯಾಯಾಧೀಶರ ವಿರುದ್ಧ ಗಡಾದ ಅವರು ಹೈಕೋರ್ಟ್ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ನೀಡಿದ್ದರು. ವಿಚಾರಣೆಯ ನಂತರ ಆರೋಪ ಸಾಬೀತಾಗಿ ನ್ಯಾಯಾಧೀಶರು ಅಮಾನತಾಗಿದ್ದರು.
ಸರ್ಕಾರಕ್ಕೆ ಜಮೀನು ವಾಪಸ್: ಭೀಮಪ್ಪ ಗಡಾದ ಅವರ ಸತತ ಕಾನೂನು ಹೋರಾಟದ ಫಲವಾಗಿ, ಕಬಳಿಕೆಯಾಗಿದ್ದ ನೂರಾರು ಕೋಟಿ ರೂಪಾಯಿ ಮೌಲ್ಯದ 160 ಎಕರೆ ಜಮೀನಿನ ನೋಂದಣಿಯನ್ನು ರದ್ದುಗೊಳಿಸಿ, ಅದನ್ನು ಮರಳಿ ಸರ್ಕಾರಕ್ಕೆ (ಕಂದಾಯ ಇಲಾಖೆಗೆ) ಸೇರಿಸುವಂತೆ ಆದೇಶ ಹೊರಬಿದ್ದಿತು.
ಸಾಮಾನ್ಯ ನಾಗರಿಕರಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸರ್ಕಾರಿ ಆಸ್ತಿಯನ್ನು ಉಳಿಸಲು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭೀಮಪ್ಪ ಗಡಾದ ಅವರ ಈ ಸಾಧನೆ ಒಂದು ಮಾದರಿಯಾಗಿದೆ.
RTI ಎಂದರೆ ಇತ್ತೀಚೆಗೆ ವಯಕ್ತಿಕ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳ ನಡುವೆ ಇಂತಹ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಸರ್ಕಾರಕ್ಕೆ ಉಳಿಸಿರುವುದು ಕೂಡ ಮಾಹಿತಿ ಹಕ್ಕು ಕಾಯ್ದೆಯ ಮೂಲಕವೇ ಎಂಬುದು ಗಮನಾರ್ಹ
ಕೊಡುವವರು ಇರುವಾಗ ತೆಗೆದುಕೊಳ್ಳುವವರು ಇಲ್ಲದಿರುವರೇ ಕೊಡುವುದು ತಪ್ಪು ಎಂದಾಗ ತೆಗೆದುಕೊಳ್ಳುವದು ಅಪರಾದ ಎಂಬಂತಿರುವಾಗ ಕೊಡುವವರು ಅಧಿಕಾರಿಗಳು ಭ್ರಷ್ಟಾಚಾರಿಗಳು ದೂರು ಏಕೆ ನೀಡುವುದಿಲ್ಲ ಇದೊಂದು ಯಕ್ಷಪ್ರಶ್ನೆಯಾಗಿದೆ

