ಗದಗ : ಫೆ.26
ವೀರೇಶ ಪೂಜಾರ ಅವರು ₹10 ಸಾವಿರ ಲಂಚ ಪಡೆಯುತ್ತಿದ್ದ ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ.ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಿಸಿದ್ದಾರೆ
ಗದಗ ಪಟ್ಟಣದ ನಿವಾಸಿ ವೀರೇಶ ಪೂಜಾರ ತನ್ನ ತಾಯಿ ಹೆಸರಿನ ಮೇಲೆ ಗದಗ ಶಹರ ಠಾಣೆಗೆ ಅನಾಮಧೇಯ ವ್ಯಕ್ತಿಗಳು ಸಲ್ಲಿಸಿದ್ದ ದೂರು ಅರ್ಜಿ ವಜಾಗೊಳಿಸಲು ಪರಿಪರಿಯಾಗಿ ಬೇಡಿದ್ದರು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಎಎಸ್ಐ ಇಂಗಳಹಳ್ಳಿ ₹13 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದರು ಈ ವೇಳೆ ಲೋಕಾಯುಕ್ತ ಪೊಲೀಸರು ಎಚ್ಚೆತ್ತುಕೊಂಡು ವೀರೇಶ ಪೂಜಾರ ಅವರಿಂದ ಹಣ ಪಡೆಯುವಾಗ ಎ ಎಸ್ ಐ ಅವರನ್ನು ಬಂಧಿಸಿದ್ದಾರೆ
ಇತ್ತೀಚೆಗೆ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಇಬ್ಬರು ಪಿಎಗಳನ್ನು ಸೇರಿ ಮೂವರು ಲಂಚದ ಆರೋಪದಲ್ಲಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು ಎಂಬುವ ಸುದ್ದಿ ಮಾಸುವ ಮುನ್ನವೇ ಮತ್ತೆ ಎಎಸ್ಐ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವುದು ರಾಜ್ಯ ಮತ್ತು ದೇಶದಲ್ಲಿ ಲಂಚಾವತಾರ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಸಾಬೀತುಪಡಿಸುತ್ತಿದೆ
ಕಳೆದ ಕೆಲವು ತಿಂಗಳುಗಳ ಹಿಂದೆ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ 224 ಶಾಸಕರು ಅಧಿಕಾರಿಗಳ ಬಳಿ ವರ್ಗಾವಣೆ ದಂಧೆಗಾಗಿ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಮಾತ್ರ ಪೋಲಿಸ್ ಭ್ರಷ್ಟಾಚಾರ ನಿಲ್ಲಿಸಬಹುದು ಎಂದು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

