ಜಿಲ್ಲಾ-ತಾಲೂಕು-ಹೋಬಳಿ ಮಟ್ಟದ ನೌಕರರ ಮುಖ್ಯಮಂತ್ರಿಗಳ ಸಂವಾದ ನಡೆಸುವ ಸಂಬಂಧ ಪೂರ್ವಭಾವಿ ಸಭೆಯನ್ನು ನಾಳೆ ಬೆಳಿಗ್ಗೆ 10 ಗಂಟೆಗೆ KSWAN ವಿಡಿಯೋ ಕಾನ್ಫರೆನ್ಸ್ ಆ ಯೋಜನೆ ಮಾಡಲಾಗಿದೆ
ವರದಿ: ಬೆಂಗಳೂರು, ಆ.4: ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಸರ್ಕಾರಿ ನೌಕರರೊಂದಿಗೆ ನೇರ ಸಂವಾದ ನಡೆಸಲು ಉದ್ದೇಶಿಸಿದ್ದು, ಇದರ ಪೂರ್ವಭಾವಿ ಸಿದ್ಧತೆಗಾಗಿ ಸಭೆಯನ್ನು ಕರೆಯಲಾಗಿದೆ.
ಇ-ಆಡಳಿತ ಕೇಂದ್ರ (CEG), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಈ ಕುರಿತು ಸಭಾ ಸೂಚನಾ ಪತ್ರ (ಸಂಖ್ಯೆ: CEG-15011/13/2026CEG-KSWAN) ಹೊರಡಿಸಲಾಗಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅವರ ಅಧ್ಯಕ್ಷತೆಯಲ್ಲಿ ದಿನಾಂಕ 05-08-2026 ರಂದು ಬೆಳಿಗ್ಗೆ 10:00 ಗಂಟೆಗೆ KSWAN VC Studio ನಲ್ಲಿ (Meeting ID: 100200) ಈ ಪೂರ್ವಭಾವಿ ಚರ್ಚಾ ಸಭೆ ನಡೆಯಲಿದೆ.

ಈ ಸಭೆಗೆ ರಾಜ್ಯದ ಎಲ್ಲಾ ಅಪರ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ತಾಲ್ಲೂಕು ತಹಶೀಲ್ದಾರ್ಗಳು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಇ-ಆಡಳಿತ ಕೇಂದ್ರದ KSWAN ಯೋಜನೆಯ ಕಾರ್ಯಕ್ರಮ ನಿರ್ದೇಶಕರಾದ SUMA SREEPATHI ಅವರು ನಿರ್ದೇಶನ ನೀಡಿದ್ದಾರೆ

