ಕೋಲಾರ ;
ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಸಮಿತಿಯ ತ್ರಿಲೋಕ್ ಕೆ ಎಂ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯ ಕೆ.ಜಿ.ಎಫ್. ತಾಲ್ಲೂಕು ಘಟಕದ ಸಭೆಯನ್ನು ಇತ್ತೀಚೆಗೆ ಕ್ಯಾಸಂಬಳ್ಳಿಯಲ್ಲಿನಡೆಸಲಾಯಿತು.
ಸಭೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂಲ ಬೂತ ಸೌಕರ್ಯಗಳ ಕೊರತೆ ಮತ್ತು ಸಾರ್ವಜನಿಕ ಆಸ್ತಿ ಆದ ಕೆರೆ, ಕುಂಟೆ ರಕ್ಷಿಸಲು ಸಲುವಾಗಿ ಒತ್ತುವರೆ ಆಗಿರುವುದರನ್ನು ದಾಖಲಾತಿ ಪಡೆದುಕೊಂಡು ತೆರವುಗೊಳಿಸಲು ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ಹೀಗೆ ಹಲವಾರು ಸಾಮಾಜಿಕ ಕಳಕಳಿಯ, ಭ್ರಷ್ಟಾಚಾರದ ವಿರುದ್ಧ ಸಮಾಜವನ್ನು ಬಳಸಿಕೊಳ್ಳಲು ಚರ್ಚಿಸಲಾಯಿತು
ಕ್ಯಾಸಂಬಳ್ಳಿ ನಾಡಕಛೇರಿ ಪಕ್ಕದಲ್ಲಿ ಸುಮಾರು 3 ಎಕೆರೆ ಸರ್ಕಾರಿ ಹುಲ್ಲುಬನ್ನಿ ಖರಾಬ್ ಜಮೀನು ಮತ್ತು ಸರ್ಕಾರಿ ಕಚೇರಿಗಳಿದ್ದು ಕೆಲವರು ಒತ್ತುವರಿ ಮಾಡಿಕೊಂಡಿದ್ದು ರಾಜಸ್ವ ನಿರೀಕ್ಷಿಕರು (RI) ಒತ್ತುವರಿ ತೆರೆವುಗೊಳಿಸುವ ಬಗ್ಗೆ ಆಶ್ವಾಸನೆ ನೀಡಿರುತ್ತಾರೆ.
ಭ್ರಷ್ಟಾಚಾರ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲು ನಮ್ಮ ಸಂಘಟನೆ ಬಲಪಡಿಸಲು ವಿದ್ಯಾವಂತ ಯುವಕರನ್ನು ಸೇರಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು
.
ಈ ಸಭೆಯಲ್ಲಿ ಜಿಲ್ಲಾ ಗೌರವ ಅಧ್ಯಕ್ಷರು ಸೋಮಸುಂದರ್ ರೆಡ್ಡಿ, ತಾಲ್ಲೂಕು ಅಧ್ಯಕ್ಷರು ತ್ರಿಲೋಕ್ ಕೆ ಎಂ, ಉಪಾಧ್ಯಕ್ಷರು ಯಾದವ ರೆಡ್ಡಿ ಮತ್ತು ಪ್ರದಾನ ಕಾರ್ಯದರ್ಶಿ ಇರ್ಷಾದ್ ಅಹಮದ್, ಸಂಘಟನೆ ಕಾರ್ಯದರ್ಶಿ ಬಾಲು S, ಕಾರ್ಯ ಕಾರಿ ಸಮಿತಿಯ ಸದಸ್ಯರಾದ ಜಯರಾಮ ರೆಡ್ಡಿ ಮತ್ತು ಮುನಿರತ್ನಪ್ಪ ಹಾಜರಿದ್ದರು.

