ಕೋಲಾರ ; ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರಿಗಳೇ ತುಂಬಿ ಹೋಗಿದ್ದಾರೆ ಹೀಗಾಗಿ ರಾಜ್ಯದಲ್ಲೆಡೆ ಭ್ರಷ್ಟಾಚಾರಿಗಳನ್ನೇ ಆಯ್ಕೆ ಮಾಡಿ ಕರ್ತವ್ಯಕ್ಕೆ ಬಿಡುತ್ತಿರುವುದರಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಅತಿ ಹೆಚ್ಚಾಗಿದೆ ಆದ್ದರಿಂದ ಕೆಪಿಎಸ್ಸಿ ಸಂಸ್ಥೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರಸಂಗ ಎಂದು ನಡೆಯಿತು
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ, ಕೋಲಾರ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕುಗಳ ಘಟಕದ ವತಿಯಿಂದ ಜಂಟಿಯಾಗಿ ಕರ್ನಾಟಕ ರಾಜ್ಯ ನಾಗರಿಕ ಹಾಗೂ ಇತರೆ ನೇಮಕಾತಿಗಳಿಗೆ ಸಂಬಂಧಪಟ್ಟಂತೆ 2004 ರಿಂದ ಮತ್ತು ಇತ್ತೀಚಿನ ದಿನಗಳಲ್ಲಿ ಕೆಪಿಎಸ್ಸಿ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿಗಳಲ್ಲಿ ಅಕ್ರಮ, ಪಾರದರ್ಶಕತೆ ಇಲ್ಲದಿರುವುದು ಹಾಗೂ ಸುಮಾರು ವರ್ಷಗಳಿಂದ ಕೆಪಿಎಸ್ಸಿ ಕಚೇರಿಯಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆ ಆಗ್ರಹಿಸಿ ಕೋಲಾರ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಯುತ ರಾಜ್ಯಪಾಲರವರಿಗೆ ಮನವಿಯನ್ನು ಸಲ್ಲಿಸಲಾಯಿತು

,
ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಹೆಚ್, ಕೋಲಾರ ಜಿಲ್ಲಾ ಗೌರವಾಧ್ಯಕ್ಷರಾದ ಜೆ ಸೋಮಸುಂದರ್ ರೆಡ್ಡಿ, ಕೋಲಾರ ಜಿಲ್ಲಾ ಅಧ್ಯಕ್ಷರಾದ ರಾಮಾಂಜಪ್ಪ ಬಿ, ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬೇಟಪ್ಪ ಎಂ, ಕೋಲಾರ ತಾಲೂಕು ಅಧ್ಯಕ್ಷರಾದ ಪವನ್ ಎಂ ಎನ್, ಕೆಜಿಎಫ್ ತಾಲೂಕು ಅಧ್ಯಕ್ಷರಾದ ತ್ರಿಲೋಕ್ ಕೆ ಎಂ, ಮಾಲೂರು ತಾಲೂಕು ಅಧ್ಯಕ್ಷರಾದ ಶ್ರೀಮೂರ್ತಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷರಾದ ಆಂಜಪ್ಪ ಎಸ್ ಹಾಗೂ ಎಲ್ಲಾ ತಾಲೂಕುಗಳ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.


