ತುಮಕೂರು : SIR ಕರ್ತವ್ಯಕ್ಕೆ ತೆರಳಿದ್ದ BLO ಹಾಗೂ ಗ್ರಾಮ ಆಡಳಿತಾಧಿಕಾರಿ ಭುವನ ಜಿಲ್ಲೆಯ ಗೂಳೂರು ಬಳಿ ಬೆಳ್ಳಂಬೆಳಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ
ವಿಶೇಷ ಮತಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯವೂ ರಾಜ್ಯದಲ್ಲಿ ಚುನಾವಣ ಆಯೋಗದ ಸೂಚನೆಯಂತೆ ನಡೆಯುತ್ತಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಪದೇಪದೇ ಮೀಟಿಂಗ್ ಮೇಲೆ ಮಾಡಿ ಆಂಡ್ರೆ ತಡ ರಾತ್ರಿವರೆಗೂ ಮೀಟಿಂಗ್ ಮಾಡಿ ಒತ್ತಡ ಹೇರಿದ ಕಾರಣವೇ ಬೆಳಿಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ತೆರಳಿ SIR ನಡೆಸಲು ಮುಂದಾಗಿದ್ದ BLO ಭುವನ ಅಪಘಾತವಾಗಿದೆ ಎಂದು ಆರೋಪಿಸಿ ಕಂದಾಯ ಇಲಾಖೆ ನೌಕರರು ತಡ ರಾತ್ರಿವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವರ್ಗಾವಣೆಗೆ ಪಟ್ಟು ಹಿಡಿದರು
ಇದಕ್ಕೂ ಮುನ್ನ ಬೆಳಿಗ್ಗೆ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಪಘಾತ ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ ಆದರು ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಅಡ್ಮಿಟ್ ಮಾಡಿಕೊಂಡು ರಾತ್ರಿವರೆಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟೈಮ್ ಪಾಸ್ ಮಾಡಿದ್ದು ಯಾಕೆ ಎಂದು ಹಲವರು ಗುಮಾನಿ ವ್ಯಕ್ತಪಡಿಸಿದ್ದಾರೆ
ಆಸ್ಪತ್ರೆ ಬಳಿ ಜಮಾಯಿಸಿದ ಕಂದಾಯ ನೌಕರರು ಜಿಲ್ಲಾಧಿಕಾರಿಗಳು ತಾವು ಪ್ರಶಸ್ತಿ ಪಡೆಯಲು ನೌಕರರಿಗೆ ಟಾರ್ಚರ್ ನೀಡುತ್ತಿದ್ದಾರೆ ಈ ಅಪಘಾತಕ್ಕೆ ಅವರ ಅವಾರ್ಡ್ ಘಾತುಕತನದ ಒತ್ತಡವೇ ಕಾರಣ ಎಂದು ಆಸ್ಪತ್ರೆ ಬಳಿ ಬಂದಿದ್ದ ಜಿಲ್ಲಾಧಿಕಾರಿ ಕಾರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು ಅಷ್ಟಕ್ಕೆ ತಣ್ಣಗಾಗದ ನೌಕರರು ತಮ್ಮ ರಾಜ್ಯಾಧ್ಯಕ್ಷ ಯೋಗೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟಿಸಿ ಖಂಡಿಸಿದರು
ಅಪಘಾತವಾಗಿದ್ದ BLO ಹಾಗೂ ಗ್ರಾಮ ಆಡಳಿತಾಧಿಕಾರಿ ಆಸ್ಪತ್ರೆಯಲ್ಲಿ ರಾತ್ರಿಗೆ ಸಾವನ್ನಪ್ಪಿದರೆ ಎಂದು ಘೋಷಿಸಿದರು ಅನಂತರವೂ ಪಾರ್ಥಿವ ಶರೀರ ನೋಡಲು MLC ಸುರೇಶ್ ಬಾಬು MLA ಸುರೇಶ್ ಗೌಡ ಅವರಿಗೂ ಅವಕಾಶ ನೀಡದೆ ಶವ ಸಾಗಿಸಲು ಮುಂದಾದರು ಈ ಸಂದರ್ಭದಲ್ಲಿ ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಆಕ್ರೋಶ ಭರಿತರಾದರು
ಮುಖ್ಯ ಮಂತ್ರಿಗಳಿಗೆ ಪೂನಾಯಿಸಿದ MLC ಯವರು ಪರಿಸ್ಥಿತಿ ಬಗ್ಗೆ ತಿಳಿಸಿ ಮತ್ತೇ ಸರ್ಕಾರಿ ಆಸ್ಪತ್ರೆಗೆ ಪಾರ್ಥಿವ ಶರೀರ ತಂದು ದರ್ಶನಕ್ಕೆ ಅವಕಾಶ ಕಲ್ಪಿಸಿದರು

