ಬೆಂಗಳೂರು/ಮುಧೋಳ :
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರು, ಕ್ಷೇತ್ರದ ಶಾಸಕರಾದ ಪಿ. ಹೆಚ್. ಪೂಜಾರ ಅವರೊಂದಿಗೆ ಏ 30, 2026ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಮುಧೋಳದ ಮಹಾರಾಜ ಕಾಲೋನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಡಾ. ಜಿ. ವಿಶ್ವನಾಥ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಪತ್ರ ಬರೆದಿದ್ದಾರೆ

ಮುಧೋಳದ ಮಹಾರಾಜ
ಕಾಲೋನಿ ಕೆರೆಯ ಅಭಿವೃದ್ಧಿ ಹಾಗೂ ನಿರ್ವಹಣೆಯ ಕುರಿತಂತೆ ಮಾರ್ಚ್ 9, 2026ರಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸ್ಥಳೀಯ ಶಾಸಕರು ಆದ ಪಿ ಹೆಚ್ ಪೂಜಾರ ಅವರು ಬಹಳ ಗಂಭೀರ ಆರೋಪದ ಚರ್ಚೆಯನ್ನು ಮಾಡಿದ್ದರು
ಈ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಹನುಮಂತ ಸಿಂಧೆ ಅವರ ನೇತೃತ್ವದಲ್ಲಿ ಹೋರಾಟಗಳು ಕೂಡ ನಡೆದಿದ್ದವು ಸಾರ್ವಜನಿಕರ ಆಹವಾಲುಗಳೊಂದಿಗೆ ಸಿಡಿಲುದ್ವನಿ ಕೂಡ ಸುದ್ಧಿ ಮಾಡಿತ್ತು ಅದರ ಲಿಂಕ್ ಇಲ್ಲಿದೆ
ಸದನದಲ್ಲಿ ನಡೆದ ಚರ್ಚೆಯ ಅನುಸಾರವಾಗಿ, ಹಾಗೂ ಮಾಧ್ಯಮಗಳ ವರದಿ ಸಂಘಟನೆ ಮತ್ತು ನಾಗರಿಕರ ಹೋರಾಟದ ಪ್ರತಿಫಲವಾಗಿ ಸ್ಥಳ ಪರಿವೀಕ್ಷಣೆಗೆ ಸಭಾಪತಿಗಳು ಹಾಗೂ ಶಾಸಕರು ಬೇಟಿ ನೀಡಲಿದ್ದಾರೆ
ಜೊತೆಗೆ ಸ್ಥಳೀಯರ ಸಾರ್ವಜನಿಕ ಅಹವಾಲು ಸಭೆಯನ್ನು ಆಯೋಜಿಸಲಾಗಿದೆ ಎಂದು ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಶಾಸಕರಾದ ಪಿ. ಹೆಚ್. ಪೂಜಾರ ಅವರು ಸಹ ಸೇರಿ ಜಂಟಿ ಪರಿವೀಕ್ಷಣೆ ನಡೆಸಲಿದ್ದಾರೆ

ಇದೇ ಸಂದರ್ಭದಲ್ಲಿ, ಮಾನ್ಯ ಸಭಾಪತಿಯವರು ಮಹಾರಾಜ ಕಾಲೋನಿ ಕೆರೆಯ ಪ್ರಸ್ತುತ ಸ್ಥಿತಿಗತಿಗಳನ್ನು ಸ್ಥಳದಲ್ಲೇ ಪರಿಶೀಲಿಸಲಿದ್ದು ನಂತರ ಸ್ಥಳೀಯ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದು ಅಧಿಕಾರಿಗಳು ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ನಕ್ಷೆಗಳು, ದಾಖಲೆಗಳು ಹಾಗೂ ಸಮಗ್ರ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿರಬೇಕೆಂದು ಸಭಾಪತಿಯವರ ಆಪ್ತ ಕಾರ್ಯದರ್ಶಿಯವರ ಮೂಲಕ ಮಾನ್ಯ ಸಭಾಪತಿಯವರು ನಿರ್ದೇಶನ ನೀಡಿದ್ದಾರೆ.

