ಬೆಂಗಳೂರು ಗ್ರಾಮಾಂತರ :
ಯುಗಾದಿ ಹಬ್ಬದ ನಂತರ ರಂಜಾನ್ ಹಬ್ಬಗಳು ನಿರಂತರವಾಗಿ ಬಂದ ಹಿನ್ನೆಲೆಯಲ್ಲಿ ಮೂರು ನಾಲ್ಕು ದಿನಗಳು ರಜೆ ಇದ್ದ ಕಾರಣ ಹಳ್ಳಿಗಳಲ್ಲಿರುವ ತಮ್ಮ ಕುಟುಂಬದ ಜೊತೆ ಜೊತೆಗೆ ಹಬ್ಬ ಮಾಡಲು ಊರಿಗೆ ತೆರಳಿದ್ದ ಅನಿವಾಸಿ ಬೆಂಗಳೂರು ಜನತೆ ಮತ್ತೆ ತಮ್ಮ ಎಂದಿನಂತೆ ದೈನಂದಿನ ಕರ್ತವ್ಯಕ್ಕೆ ಹಾಜರಾಗಲು ಇಂದು ಭಾನುವಾರ ಮಧ್ಯಾಹ್ನದಿಂದ ವಾಪಸ್ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ ಕಾರಣದಿಂದಾಗಿ ರಸ್ತೆ ತುಂಬೆಲ್ಲಾ ಬಾರಿ ವಾಹನಗಳೇ ಕಾಣುತ್ತಿದ್ದವು ಸಂಜೆಯಾಗುತ್ತಿದ್ದಂತೆ ಮತ್ತಷ್ಟು ವಾಹನಗಳು ಹೆಚ್ಚಾದವು ಕ್ರಮೇಣ ಸಂಚಾರದಲ್ಲಿ ವ್ಯತ್ಯಯ ಉಂಟಾಗಲು ಪ್ರಾರಂಭವಾಯಿತು ನಿಮಿಷ ಗಂಟೆಗಳು ಕಳೆದಂತೆ ನೆಲಮಂಗಲ ಬೈಪಾಸ್ ಜಂಕ್ಷನ್ ninda ಕುಣಿಗಲ್ ಕಡೆಯ ರಸ್ತೆ ಸುಮಾರು ಕಿಲೋಮೀಟರ್ ಘಟ್ಟಲೆ ಟ್ರಾಪಿಕ್ ಜಾಮ್ ಆಗಿದ್ದರಿಂದ ನಿಂತಲ್ಲೇ ನಿಂತ ವಾಹನ ಚಾಲಕರು ಮತ್ತು ಪ್ರಯಾಣಿಕರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದು ಕಂಡು ಬಂತು 20 ವರ್ಷದ ಭವಿಷ್ಯದ ಯೋಜನೆಗಳು ರೂಪುಗೊಳ್ಳಬೇಕಿತ್ತು ಆದರೆ 20 ವರ್ಷದ ಹಿಂದಕ್ಕೆ ಹೋಗಿದ್ದೇವೆ ಇಷ್ಟೆಲ್ಲ ತೆರಿಗೆಗಳು ಕಟ್ಟುತ್ತಿದ್ದರು ಸಹ ನಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೆಲಸ ಮಾಡುತಿಲ್ಲಾ ಎಂದು ಬೇಡಿಕೊಳ್ಳುತ್ತಿದ್ದರು
ಏನೇ ಆಗಲಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳು ಸೇರುವ ಜಾಗ ಮತ್ತು ರಸ್ತೆಯನ್ನು ಅಗಲೀಕರಣ ಅಥವಾ ಟ್ರಾಪಿಕ್ ಮುಕ್ತ ಮಾಡುವಂತೆ ಜನರ ಒತ್ತಾಯವಾಗಿದೆ
ಇನ್ನು ಯಶವಂತಪುರದಿಂದ 8 ನೇ ಮೈಲಿ ಬಿಡುವವರೆಗೂ ಜೀವ ಹಾಗೂ ಸಮಯ ನಮ್ಮ ಕೈಯಲ್ಲಿಲ್ಲ ಎಂದು ಗೊಣಗುತ್ತಾರೆ

