filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
ತುಮಕೂರು :
ಜಿಲ್ಲೆಯ ತುಮಕೂರು ನಗರಪಾಲಿಕೆಗೆ ಹೊಂದಿಕೊಂಡಿರುವ ಬೆಳಗುಂಬ ಪಂಚಾಯ್ತಿಯಲ್ಲಿ ಬಲಾಢ್ಯರಿಗೆ ಒಂದು ಜನಸಾಮಾನ್ಯರಿಗೆ ಒಂದು ಕಾನೂನು ಇದೆ…
ಬೆಳಗುಂಬ ಮುಖ್ಯ ರಸ್ತೆಯಲ್ಲಿ ಕಂದಾಯ ಭೂಮಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಾಣಿಜ್ಯ ಕಟ್ಟಡಕ್ಕೆ ಯಾವುದೇ ಅನುಮತಿ ನೀಡಿಲ್ಲ
ಕಟ್ಟಡಕ್ಕೆ ಅನುಮತಿ ನೀಡಿಲ್ಲವಾದರೂ ವಾಣಿಜ್ಯ ವ್ಯಾಪಾರದ ಕಟ್ಟಡ ಕಟ್ಟಿರುವ ಪ್ರಭಾವಿ ವ್ಯಕ್ತಿ ಮಾಜಿ ಮಂತ್ರಿ ಗೋಪಾಲಯ್ಯ ಅವರ ಸಂಬಂಧಿಗಳು

ಸದರಿ ಕಟ್ಟಡದಲ್ಲಿ ಲಿಕ್ಕರ್ ಮಾರ್ಟ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಾಗಿದೆ ಅದಕ್ಕೆ ಮುಲಾಜಿಗೋ ಅಥವಾ ಲಂಚಕ್ಕೋ… ಅಬಕಾರಿ ಅಧಿಕಾರಿಗಳು ನೀತಿ ನಿಯಮ 3 ನ್ನೂ ಬಿಟ್ಟು ವೈನ್ ಸ್ಟೋರ್ ತೆರೆಯಲು ಅನುಮತಿ ಕೊಟ್ಟಿದ್ದಾರೆ
ಆದರೆ ಪಂಚಾಯ್ತಿಯಿಂದ ಯಾವುದೇ ಲೈಸೆನ್ಸ್ ನೀಡದೇ ಇದ್ದರೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಬಿಲ್ ಕಲೆಕ್ಟರ್ ಯಾವುದೇ ಕ್ರಮಕ್ಕೆ ಬರೆದಿಲ್ಲ ಹಾಗಂತ ಅವರಿಗೇನು ಮಾಹಿತಿ ಇಲ್ಲ ಎಂಬುದಿಲ್ಲ ಎಲ್ಲ ಗೊತ್ತಿದ್ದರೂ ಜಾಣ ಕುರುಡರಾಗಿದ್ದಾರೆ…
ಎಲ್ಲಾ ಮಾಹಿತಿ ಹಕ್ಕು ಕಾಯ್ದೆ ಮೂಲಕ ದಾಖಲೆಗಳನ್ನು ಪಡೆದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಅದೇ ಪಂಚಾಯ್ತಿ PDO ಅವರಿಗೆ ಹಾಗೂ ಜಿಲ್ಲಾ ಪಂಚಾಯ್ತಿ CEO ಅವರಿಗೆ ದೂರು ನೀಡಿದ್ದಾರೆ

ದೂರು ನೀಡಿದ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಅಂತೀರಾ… ಇಲ್ಲಾ ಸುಳ್ಳು ಅಂತ ಕೆಲಸಕ್ಕೆ ಕೈ ಹಾಕಿಲ್ಲ
ಆದರೆ ZP CEO ಅವರು DS ಮೂಲಕ EO ಅವರಿಗೆ ವರ್ಗಾಯಿಸಿದ್ದಾರೆ … ಅಲ್ಲಿಗೆ ಕಡತ ನಿಂತುಹೋಗಿದೆ
ಇನ್ನೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಜಾಣ ಮೌನವಹಿಸಿದ್ದಾರೆ ಎಂದರೆ ನಾವೇನು ಹೇಳಬೇಕಾಗಿಲ್ಲ ನಿಮಗೆ ಎಲ್ಲ ಅರ್ಥವಾಗುತ್ತದೆ
ಅಕ್ರಮವಾಗಿ ಕಂದಾಯ ಭೂಮಿಯಲ್ಲಿ ವಾಣಿಜ್ಯ ಕಟ್ಟಡ ಕಟ್ಟಿರುವುದಲ್ಲದೆ, ಪಂಚಾಯ್ತಿಯಿಂದ ಯಾವುದೇ ಲೈಸೆನ್ಸ್ ಕೂಡ ಪಡೆಯದೆ ಅಕ್ರಮವಾಗಿ ನಡೆಯುತ್ತಿರುವ ವೈನ್ ಸ್ಟೋರ್ ಮುಚ್ಚಿ ಸರ್ಕಾರಿ ಆದೇಶ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಬಿಲ್ಡಿಂಗ್ ಕೆಡವಲು ಆದೇಶ ನೀಡುವಂತೆ ಹಾಗೂ ಜಾಣ ಮೌನ ವಹಿಸಿ ಸರ್ಕಾರಕ್ಕೆ ನಂಬಿಕೆ ದ್ರೋಹ ಮಾಡಿರುವ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಲವೇ ದಿನಗಳಲ್ಲಿ ತುಮಕೂರು ಜಿಲ್ಲಾ ಪಂಚಾಯ್ತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಕುಣಿಗಲ್ ತಿಳಿಸಿದ್ದಾರೆ.

