ಮೇಲ್ಮನೆಗೆ ಜಾಣಗೆರೆ ನಾಮನಿರ್ದೇಶಿಸಿ ಎಂದು ನ್ಯಾ.ಗೋಪಾಲಗೌಡ ಒತ್ತಾಯಿಸಿದರು ಅವರು ಜಾಣಗೆರೆ ವೆಂಕಟರಾಮಯ್ಯ ಅವರ 75 ವರ್ಷದ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಬೆಂಗಳೂರು ; ಸಿನಿಮಾ ತಾರೆಯರನ್ನು
ವಿಧಾನ ಪರಿಷತ್ತಿಗೆ ಕಳುಹಿಸಲಾಗುತ್ತಿವೆ. ಅವರ ಬದಲು ಕನ್ನಡಕ್ಕಾಗಿ ಸಾಹಿತ್ಯದ ಜೊತೆಗೆ ಜೀವ ಸವೆಸಿದ ಕನ್ನಡ ಪರ ಹೋರಾಟಗಾರರನ್ನು ನೇಮಕ ಮಾಡಬೇಕೆಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಒತ್ತಾಯಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಜಾಣಗೆರೆ ಅಭಿನಂದನಾ ಸಮಿತಿ ಆಯೋಜಿಸಿದ್ದ ಜಾಣಗೆರೆ-75 ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಕ್ಕಾಗಿ ಜೀವ ಸವೆಸಿದ ಜಾಣಗೆರೆ ವೆಂಕಟರಾಮಯ್ಯ ಅಂತವರನ್ನು ಮಾಡಿ ಎಂದರು

ಜಾಣಗೆರೆ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ಡಾ.ಬಂಜಗೆರೆ ಜಯಪ್ರಕಾಶ್, ರಾಜಹನ್ಸ್ ಪ್ರಿಂಟರ್ಸ್ ನಮಾಲೀಕ ಎ.ಬಾಲಚಂದ್ರಮತ್ತಿತರರು ಇದ್ದರು. ಇದಕ್ಕೂ ಮೊದಲು ಬಿಬಿಎಂಪಿ ಕಚೇರಿಯ ಕೆಂಪೇಗೌಡರ ಪ್ರತಿಮೆ ಬಳಿಯಿಂದ ರವೀಂದ್ರ ಕಲಾಕ್ಷೇತ್ರದವರೆಗೂ ಜಾನಪದ ಕಲಾ ತಂಡಗಳೊಂದಿಗೆ ಬೆಳ್ಳಿ ರಥದಲ್ಲಿ ಜಾಣಗೆರೆ ಅವರನ್ನು ಕರೆತರಲಾಯಿತು. ಮೆರವಣಿಗೆಗೆ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಚಾಲನೆ ನೀಡಿದರು.

‘ಜಾಣಗೆರೆ-75’ರ ಸಂಭ್ರಮದ ಹಿನ್ನೆಲೆಯಲ್ಲಿ ಮಧ್ಯಾಹ್ನ ಕನ್ನಡ-ಕನ್ನಡಿಗ-ಕರ್ನಾಟಕ: ಮುಂದೇನು?’, ನಡೆದ ವಿಚಾರಗೋಷ್ಟಿಯಲ್ಲಿ ಸಾಹಿತಿ ಪ್ರೊ. ಎಸ್.ಜಿ, ಸಿದ್ದರಾಮಯ್ಯ, ಕನ್ನಡ ಎದುರಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಬಗ್ಗೆ ಪ್ರೊ.ನಾಗೇಗೌಡ ಕೀಲಾರ ಶಿವಲಿಂಗಯ್ಯ, ಸಂವಿಧಾನದ ಆರ್ಟಿಕಲ್ ತಿದ್ದುಪಡಿ ಮತ್ತು ಕರ್ನಾಟಕದ ಅಭಿವೃದ್ಧಿ ರಾಜಕೀಯ ಹಾದಿ ಬಗ್ಗೆ ರವಿ ಕೃಷ್ಣಾರೆಡ್ಡಿ, ಪ್ರಸ್ತುತ ಮುಂದಿನ ರಾಜಕೀಯ ಪರಿಸ್ಥಿತಿ ಬಗ್ಗೆ ಹಾಗೂ ಉದ್ಯಮ ಹಾಗೂ ಉದ್ಯೋಗ ಕುರಿತ ಪಾರ್ವತೀಶ ಬಿಳಿದಾಳೆ ವಿಚಾರ ಮಂಡಿಸಿದರು. ಬಳಿಕ ಜಾಣಗೆರೆ ಜತೆಗೆ ಸಂವಾದ ಕೂಡ ನಡೆಯಿತು.
ಜಾಣಗೆರೆ ಕನ್ನಡ ಚಳವಳಿ ಕಟ್ಟಿದ ಹೋರಾಟಗಾರ: ಎಲ್.ಹನುಮಂತಯ್ಯ
ವೈಚಾರಿಕತೆ ಮತ್ತು ವೈಜ್ಞಾನಿಕತೆಯ ನೆಲೆಯಲ್ಲಿ ಕನ್ನಡ ಚಳವಳಿಯನ್ನು ಕಟ್ಟಿದ ಹೋರಾಟಗಾರರಲ್ಲಿ ಜಾಣಗೆರೆ ವೆಂಕಟರಾಮಯ್ಯ ಕೂಡ ಒಬ್ಬರು ಎಂದು ರಾಜ್ಯಸಭಾ ಮಾಜಿ ಸದಸ್ಯ, ಹಿರಿಯ ಕವಿ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಜಾಣಗೆರೆ-75 ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈಚಾರಿಕ ಮತ್ತು ವೈಜ್ಞಾನಿಕವಾದದ ಮೂಲಕವೇ ಕನ್ನಡ ಚಳವಳಿ ಬೆಳೆಯಬೇಕೆಂದು ಕುವೆಂಪು ಹೇಳಿಕೊಟ್ಟಿದ್ದರು. ಅದರಂತೆ ಜಾಣಗೆರೆಯಂತಹ ಹೋರಾಟಗಾರರು ದಾರಿ ತೋರಿಸಿಕೊಟ್ಟಿದ್ದಾರೆ ಎಂದು ಎಲ್.ಹನುಮಂತಯ್ಯ ಹೇಳಿದರು.
ಹಿರಿಯ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡ ಹೋರಾಟಗಾರರು ಬಹಳಷ್ಟಿದ್ದಾರೆ. ಹಾಗೆಯೇ ಪತ್ರಕರ್ತರೂ ಬಹಳಷ್ಟಿದ್ದಾರೆ. ಇವರಲ್ಲಿ ನಮ್ಮ ಜಾಣಗೆರೆಯವರು ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲೂ ಜಾಣಗೆರೆಯವರು ತಮ್ಮದೇ ಆದ ಕೊಡುಗೆ ನೀಡಿದ್ದು ಅನೇಕ ಕಥಾ ಸಂಕಲನ, ವಿಚಾರ ಸಾಹಿತ್ಯ, ಕಾದಂಬರಿಗಳನ್ನೂ ಬರೆದಿದ್ದಾರೆ. 75 ವರ್ಷಗಳ ತುಂಬು ಜೀವನ ಸಾಗಿಸುತ್ತಾ ಮುನ್ನಡೆಯುತ್ತಿರುವ ಜಾಣಗೆರೆಯವರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು


