ಡಿಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನ
ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಆರಂಭದ ದಿನಗಳಿಂದಲೂ ಅನೇಕ ರೀತಿಯ ಗೊಂದಲಗಳು ಇದ್ದವು ಖಾತೆ ಹಂಚಿಕೆ ವಿಚಾರದಲ್ಲೂ ವೈಮನಸುಗಳು ಉಂಟಾದವು
ಬಿ ನಾಗೇಂದ್ರ ಅವರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರದ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸಲಾಗಿತ್ತು
ಈ ಭ್ರಷ್ಟಾಚಾರದ ವಿಚಾರ ಇನ್ನೂ ಮುಗಿಯದಿದ್ದರೂ ಡಿಕೆ ಶಿವಕುಮಾರ್ ಅವರ ಸರ್ಕಾರದಲ್ಲಿ ಪ್ರವೇಶ ಪಡೆದ ದಿನದಿಂದಲೂ ಸಾರ್ವಜನಿಕವಾಗಿ ಹಾಗೂ ವಿರೋಧ ಪಕ್ಷಗಳ ಬಹಳಷ್ಟು ಟೀಕೆಗಳು ಬಂದಿದ್ದವು ಈ ಹಿನ್ನೆಲೆಯಲ್ಲಿ ಅದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಯಿತು
ವಿಧಾನಸಭೆಯ ಅಧಿವೇಶನ ಆರಂಭದ ದಿನದಿಂದಲೂ ಸದನದ ಒಳಗೆ ಹೋರಾಟ ನಡೆಸಲಾಗಿತ್ತು
ಮೂರು ದಿನಗಳ ಮುನ್ನವೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಪ್ರಸಂಗ ನಡೆದು ಬಿ ನಾಗೇಂದ್ರ ಅವರ ಪ್ರಕರಣ ಅಧಿವೇಶನವನ್ನು ಮಟಕುಗೊಳಿಸಿತು
ಸದನದ ಹೊರಗೆ ಮತ್ತಷ್ಟು ಪ್ರತಿಭಟನೆಗಳನ್ನು ಚುರುಕುಗೊಳಿಸಿದ ನಂತರ ಬಳ್ಳಾರಿಗೆ ಪಾದಯಾತ್ರೆಯನ್ನು ಸಹ ಬಿಜೆಪಿ ಪಕ್ಷವೂ ಹಮ್ಮಿಕೊಳ್ಳಲಾಗಿತ್ತು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಡಿಕೆ ಶಿವಕುಮಾರ್ ಅವರ ಸರ್ಕಾರಕ್ಕೆ ಆಗಬಹುದಾದ ಮುಂದಿನ ಅನಾಹುತವುಗಳನ್ನು ತಪ್ಪಿಸಿಕೊಳ್ಳಲು ಈಗ ಬಿ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ಕೊಡಸುವುದರಲ್ಲಿ ಯಶಸ್ವಿಯಾಗಿದೆ
ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಿ ನಾಗೇಂದ್ರ ಅವರು ರೊಚ್ಚಿಗೇಳುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿದ್ದು ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ

