ಬರ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ
ರಾಜ್ಯದಲ್ಲಿ ಕೆಲವು ಕಡೆ ಉತ್ತಮ ಮಳೆಯಾಗುತ್ತಿದ್ದರೂ ಸಹ ಬಹಳಷ್ಟು ಪ್ರದೇಶಗಳಲ್ಲಿ ಮಳೆಯಾಗದೆ ಬಿತ್ತನೆ ಕುಂಠಿತವಾಗಿದ್ದು ರೈತರು ದಿನಂಪ್ರತಿ ಆಕಾಶ ನೋಡುವ ಪರಿಸ್ಥಿತಿ ತಲೆದೋರಿದ್ದು ಬರಗಾಲದ ಮುನ್ಸೂಚನೆ ದೊರಕಿರುವ ಹಿನ್ನೆಲೆಯಲ್ಲಿ ಮುಂದಿನ ಜೀವನದ ಬಗ್ಗೆ ಆತಂಕ ಸೃಷ್ಟಿಯಾಗಿದೆ
ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶೇಕಡ 60ಕ್ಕಿಂತ ಕಡಿಮೆ ಮಳೆಯಾಗಿರುವ ಹಾಗೂ ಮೂರು ವಾರಗಳಿಗೂ ಹೆಚ್ಚು ಮಳೆಯಾಗದಿರುವ ಪ್ರದೇಶಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಳ ಮೂಲಕ ಸ್ಥಳ ಪರಿಶೀಲನೆ ಮಾಡಿಸಿ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿರುವ ಶಾಲಿನಿ ರಜನಿಸ್ ರವರು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾಗಿರುವ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ
ಇದರಿಂದಾಗಿ ಬರಪೀಡಿತ ಪ್ರದೇಶದ ರೈತರಿಗೆ ಸರ್ಕಾರದಿಂದ ಅದೆಷ್ಟರ ಮಟ್ಟಿಗೆ ಅನುಕೂಲವಾಗುವುದು ಮತ್ತು ಈಗಾಗಲೇ ಮುಖ್ಯಮಂತ್ರಿಗಳು ತಿಳಿಸಿರುವಂತೆ ಬಡ ರೈತರ ಸಾಲ ಮನ್ನಾವಾಗುವುದೇ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ

