
ಕ್ಯಾಸಂಬಳ್ಳಿ ಕಾಲೇಜು ಜಾಗದ ವಿಚಾರ ಪ್ರಜಾ ಸೇವಾ ಅಭಿಯಾನದಲ್ಲಿ ಮತ್ತೊಮ್ಮೆ ಅರ್ಜಿ, ತಾತ್ವಿಕ ಅಂತ್ಯ ಕಾಣಿಸುವವರೆಗೂ ಬಿಡುವ ಮಾತೆ ಇಲ್ಲ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ಪ್ರಜಾ ಸೇವಾ ಅಭಿಯಾನದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಮಾತನಾಡಿದರು
ಕೋಲಾರ/ಕೆಜಿಎಫ್
ಕ್ಯಾಸಂಬಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲೇಜಿಗಾಗಿ ಶಿಕ್ಷಣ ಇಲಾಖೆಗೆ ಸರ್ವೆ ಮುಖಾಂತರ ಗುರುತಿಸಿರುವ 12 ಎಕರೆ ಜಮೀನಿನಲ್ಲಿ ಅಕ್ರಮವಾಗಿ ನರೇಗಾ ಕಾಮಗಾರಿ ನಡೆದಿರುವ ಕುರಿತು ದೂರು ಸಲ್ಲಿಸಲಾಗಿತ್ತು
ಈ ಬಗ್ಗೆ ಜಿಲ್ಲಾ ಪಂಚಾಯ್ತಿಯ ಓಂಬುಡ್ಸ್ ಮನ್ ಅವರು ಶಿಕ್ಷಣ ಇಲಾಖೆಯ BEO ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಸಭೆಗೆ ಕರೆದು ಕಾಮಗಾರಿ ನಡೆದಿರುವ ಸ್ಥಳವನ್ನು ಗುರುತಿಸಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು
ಅಲ್ಲದೆ ದಿನಾಂಕ 20.09.2026ರಂದು ತಹಸೀಲ್ದಾರ್ ಅವರಿಗೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು
ಆದರೆ ಇದುವರೆಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಕ್ಯಾಸಂಬಳ್ಳಿ ಭಾಗದ ಜನರಲ್ಲಿ ಹಾಗೂ ಕಾಲೇಜು ಕಟ್ಟಡ ಕಾಮಗಾರಿ ಬಗ್ಗೆ ಹೋರಾಟ ನಡೆಸುತ್ತಿರುವವರಲ್ಲಿ ನಿರಾಸೆ ಮೂಡಿಸಿದೆ
ಈ ಹಿನ್ನೆಲೆಯಲ್ಲಿ ಇಂದು ನಡೆದ ಪ್ರಜಾ ಸೇವಾ ಅಭಿಯಾನದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗಿದೆ ಎಂದು ರಾಜ್ಯ ಮಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಗೌರವಾಧ್ಯಕ್ಷರಾದ ಸೋಮಸುಂದರ್ ರೆಡ್ಡಿ ಹಾಗೂ ಕೆಜಿಎಫ್ ಘಟಕದ ಅಧ್ಯಕ್ಷರಾದ ತ್ರಿಲೋಕ್ ಅವರು ತಿಳಿಸಿದ್ದಾರೆ
ಕ್ಯಾಸಂಬಳ್ಳಿಗೆ ಕಾಲೇಜು ನಿರ್ಮಾಣವಾಗಬೇಕು ಎಂಬುದು ನಮ್ಮ ನಿರಂತರ ಹೋರಾಟವಾಗಿದ್ದು ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಘಟನೆಗಳು ಧ್ವನಿಗೂಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ
ಈ ಕುರಿತು ಸಿಡಿಲು ಧ್ವನಿ ನ್ಯೂಸ್ ಚಾನೆಲ್ ವತಿಯಿಂದ ವಿಶೇಷ ವರದಿ
ಸೋಮಸುಂದರ ರೆಡ್ಡಿ ಸಿಡಿಲು ಧ್ವನಿ ನ್ಯೂಸ್– ಕೋಲಾರ

