ಶಿಡ್ಲಘಟ್ಟ :
ಕಾಂಗ್ರೆಸ್ ನಾಯಕ ರಾಜೀವ್ ಗೌಡ, ಶಿಡ್ಲಘಟ್ಟ ಪುರಸಭೆಯ ಆಯುಕ್ತೆ ಅಮೃತಾ ಗೌಡರಿಗೆ ಚಪ್ಪಲಿಯಿಂದ ಹೊಡೆಸುವೆ ಮತ್ತು ತಾಲೂಕಿನಿಂದಲೇ ಓಡಿಸುವುದಾಗಿ ಬೆದರಿಕೆ ಹಾಕಿದ ವೀಡಿಯೊ ವೈರಲ್ ಆಗಿದ್ದು ಸಾರ್ವಜನಿಕರಲ್ಲಿ ಆಕೋಶ ವ್ಯಕ್ತವಾಗಿದೆ
ಈ ಸಂಬಂಧ ಅಮ್ ಆದ್ಮಿ ಪಕ್ಷದ ಮಹಿಳಾ ಘಟಕ ಮತ್ತು ಮುಖಂಡರು ದೂರು ನೀಡಿರುವ ಘಟನೆ ನಡೆದಿದೆ

ವೈರಲ್ ಆಗಿರುವ ಆಡಿಯೋದಲ್ಲಿ, ಮಹಿಳಾಧಿಕಾರಿ ತಮ್ಮ ವಿರುದ್ಧ ಅಂತಹ (ಅವಾಚ್ಯ) ಭಾಷೆ ಬಳಸದಂತೆ ಹಾಗೂ ಸದರಿ ಬ್ಯಾನರ್ ನಿಂದಾಗಿ ಅಪಘಾತವಾಗಿರುವ ಬಗ್ಗೆ ವಿನಂತಿಸುತ್ತಾರೆ ಆದರೂ ರಾಜೀವ್ ಗೌಡ ಅವಾಚ್ಯವಾಗಿ ಆಕ್ಷೇಪಾರ್ಹ ಭಾಷೆ ಬಳಸಿರುವುದು ಕಂಡುಬಂದಿದೆ ಬಿಡುಗಡೆಯಾಗಬೇಕಿರುವ ಕನ್ನಡ ಚಿತ್ರ, ಸಚಿವ ಜಮೀರ್ ಪುತ್ರ ನಟಿಸಿರುವ ‘ಕಲ್ಟ್’ ಸಿನಿಮಾಗೆ ಶುಭ ಹಾರೈಸಿ ಪಟ್ಟಣದಲ್ಲಿ ತಮ್ಮ ಬೆಂಬಲಿಗರು ಹಾಕಿದ್ದ ಬ್ಯಾನರ್ ತೆಗೆದು ಹಾಕಿದ್ದಕ್ಕೆ ರಾಜೀವ್ ಗೌಡ, ಅಧಿಕಾರಿಯ ಮೇಲೆ ಫೋನ್ನಲ್ಲಿ ಮನಬಂದಂತೆ ರೇಗಾಡಿದ್ದಾರೆ.
ಚಪ್ಪಲಿಯಿಂದ ಹೊಡೆಸುತ್ತೇನೆ, ಕಚೇರಿಯನ್ನೇ ಸುಟ್ಟು ಹಾಕಿಸುತ್ತೇನೆ ಎಂದಿರುವ ರಾಜೀವ್ ಗೌಡ: “ಬ್ಯಾನರ್ ತೆಗೆದುಹಾಕಲು ನಿಮಗೆ ಎಷ್ಟು ಧೈರ್ಯ? ನಾಳೆಯೊಳಗೆ ಅದನ್ನು ಮತ್ತೆ ಹಾಕದಿದ್ದರೆ, ನಾನು ನಿಮ್ಮ ಕಚೇರಿಯನ್ನೇ ಸುಡುತ್ತೇನೆ. ನಾನು ಜನರನ್ನು ಕರೆಸಿ ಚಪ್ಪಲಿಯಿಂದ ಹೊಡೆಯುವಂತೆ ಮಾಡಿ ತಾಲೂಕಿನಿಂದ ಹೊರಹಾಕುತ್ತೇನೆ ಎಂದು ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿರುವುದು ಸ್ಪಷ್ಟವಾಗಿದೆ.
ಪೌರಕಾರ್ಮಿಕರ ಪ್ರತಿಭಟನೆ ತಮ್ಮ ಅಧಿಕಾರಿಯನ್ನು ಮನ ಬಂದಂತೆ ಬೈದಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪೌರ ಕಾರ್ಮಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು


