ಅತ್ಯಾಚಾರ ದೂರು ಕದಬಳ್ಳಿ ಗ್ರಾಮ ಆಡಳಿತ ಅಧಿಕಾರಿ ಬಂಧನ
ನಾಗಮಂಗಲ ; ಜಮೀನಿನ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಯ ಮನವೊಲಿಕೆ ಮಾಡಿ ನಂಬಿಸಿ ಮನೆಗೆ ಕರೆದೊಯ್ದು ಜ್ಯೂಸ್ ನಲ್ಲಿ ಅಮಲೇರುವ ಔಷಧ ಬೆರೆಸಿ ಅತ್ಯಾಚಾರ ವೀಡಿಯೋ ಮಾಡಿಕೊಂಡು ಆಗಾಗ್ಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಡ ಮಾಡುತ್ತಿರುವುದಾಗಿ ಸಂತ್ರಸ್ತೆ ಆರೋಪ ದೂರು
ಅತ್ಯಾಚಾರ ವೆಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಎಂದು ಸಂತ್ರಸ್ಥ ಮಹಿಳೆ ನೀಡಿದ ದೂರಿನ ಮೇರೆಗೆ ಗ್ರಾಮ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿ ಕದಬಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮರಿಸ್ವಾಮಿಯನ್ನು ಬೆಳ್ಳೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕದಬಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ ಮರಿಸ್ವಾಮಿ ಬಂಧಿತ ಆರೋಪಿ. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿ ಬಂದಾಗ ಜ್ಯೂಸ್ನಲ್ಲಿ ಅಮಲು ಬರುವ ಔಷಧ ಮಿಶ್ರಣ ಮಾಡಿ ಕುಡಿಸಿ ಅತ್ಯಾಚಾರವೆಸಗಿದ್ದಾನೆ. ತಾನು ಎಸಗಿದ ಕೃತ್ಯದ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿ ಮರಿಸ್ವಾಮಿ ಗೊಂಡೇನಹಳ್ಳಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಣಕನಹಳ್ಳಿ ಗ್ರಾಮದ
ಮಹಿಳೆಯೊಬ್ಬಳು ಜಮೀನಿನ ವಿಷಯಕ್ಕೆ ಸಂಬಂದಪಟ್ಟಂತೆ ಈತನ ಬಳಿ ಸಹಾಯ ಕೇಳಿಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ಜಮೀನಿನ ದಾಖಲೆಗಳು ಸರಿ ಮಾಡಿ ಕೊಡುವುದಾಗಿ ಪುಶಲಾಯಿಸಿ ಮಹಿಳೆಯನ್ನು ಮರಿಸ್ವಾಮಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮಹಿಳೆಗೆ ಗೊತ್ತಾಗದಂತೆ ಹಣ್ಣಿನ ರಸಕ್ಕೆ ಅಮಲೇರುವ ಔಷಧ ಬೆರೆಸಿ ಕುಡಿಸಿ, ಆಕೆ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರವೆಸಗಿದ್ದಷ್ಟೇ ಅಲ್ಲದೇ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನು. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಗಾಗ್ಗೆ ಮಹಿಳೆಯನ್ನು ಒತ್ತಾಯಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೆ.16 ರಂದು ಅರಣಿ ಪಂಚಾಯ್ತಿಯಲ್ಲಿ ಎಸ್ಐಆರ್ನಲ್ಲಿ ನಿರತರಾಗಿದ್ದ ಸಮಯದಲ್ಲಿ ನನ್ನ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರ ಮತ್ತು ಹೊಂಡಾ ಡಿಯೋ ಬೈಕನ್ನು
ಕಿತ್ತುಕೊಂಡು ಹೋಗಿದ್ದಾನೆ. ಸೆ.17 ಮರಿಸ್ವಾಮಿ ಮತ್ತು ಮಂಜುಳ ಸೇರಿ ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ನನಗೆ ಆಗಾಗ್ಗೆ ಕೊಲೆ ಮಾಡುತ್ತೇನೆಂದು ಹೆದರಿಸುತ್ತಿದ್ದು, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾನೆಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗ್ರಾಮ ಆಡಳಿತ ಅಧಿಕಾರಿ ಮರಿಸ್ವಾಮಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಲತಃ ಮೈಸೂರಿನವನಾದ ಮರಿಸ್ವಾಮಿ ನಿವೃತ್ತ ಸೇನಾನಿ ಆಗಿದ್ದು ಆ ನಂತರದಲ್ಲಿ ಗ್ರಾಮ ಆಡಳಿತಾಧಿಕಾರಿ ಕೆಲಸಕ್ಕೆ ಸೇರಿದ್ದನು. ಈತ ಗೊಂಡೇನಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಕದಬಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದನು ಎನ್ನಲಾಗಿದೆ.
ಸಿಡಿಲು ಧ್ವನಿ ನ್ಯೂಸ್ ; ಮಂಡ್ಯ

