ಕಾರ್ಮಿಕರ ಆರೋಗ್ಯ ಕಾಳಜಿಗಾಗಿ ರಾಜ್ಯದಲ್ಲಿ ಹೆಚ್ಚು ESI ಆಸ್ಪತ್ರೆ ನಿರ್ಮಾಣದ ಕನಸು ಕಂಡಿರುವ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಾನೂನು ತೊಡಕು ನಿವಾರಣೆಗೆ ಕೋರಿಕೆ ಸಲ್ಲಿಸಿದ್ದಾರೆ

ಕರ್ನಾಟಕದಲ್ಲಿ 35.33 ಲಕ್ಷ ವಿಮೆದಾರರು (Insured Persons) ಇದ್ದು, ಇವರ ಮೂಲಕ ಸುಮಾರು 150 ಲಕ್ಷ ಕುಟುಂಬ ಸದಸ್ಯರು ಪ್ರಯೋಜನ ಪಡೆಯುತ್ತಿದ್ದಾರೆ. ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ ಬಂದ ನಂತರ ಈ ಸಂಖ್ಯೆ ಇನ್ನೂ 15–20%ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ವಿಮೆದಾರರು ಇರಬೇಕು ಎಂಬ ಪ್ರಸ್ತುತ ಮಾನದಂಡವು ಹಲವು ಜಿಲ್ಲೆಗಳಲ್ಲಿ ESI ಆಸ್ಪತ್ರೆಗಳನ್ನು ಸ್ಥಾಪಿಸಲು ಪ್ರಮುಖ ಅಡ್ಡಿಯಾಗಿದೆ.
ಕರ್ನಾಟಕದಾದ್ಯಂತ 100 ಹಾಸಿಗೆಗಳ ESI ಆಸ್ಪತ್ರೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಪ್ರಸ್ತುತ ESI ಮಾನದಂಡಗಳಲ್ಲಿ ಸಡಿಲಿಕೆ ನೀಡುವಂತೆ ಕೋರಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾನ್ಯ ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಅವರಿಗೆ

ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪತ್ರ ಬರೆದು ಒತ್ತಾಯಿಸಿದ್ದಾರೆ.

