ಸಾರಿಗೆ ನಿಗಮಗಳ ಪುರುಷ ನೌಕರರಿಗೆ ಸಿಹಿಸುದ್ದಿ: ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ‘ಪಿತೃತ್ವ ರಜೆ’ ಮಂಜೂರು!
ಬೆಂಗಳೂರು: ಸಾರಿಗೆ ನಿಗಮಗಳ ಪುರುಷ ನೌಕರರಿಗೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಅವರ ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆಯನ್ನು ಮಂಜೂರು ಮಾಡಿ ಅನುಮೋದನೆ ನೀಡಿದೆ.
ಕರ್ನಾಟಕ ಸರ್ಕಾರದ ಸಚಿವಾಲಯದ ಸಾರಿಗೆ ಇಲಾಖೆಯು ಈ ಆದೇಶವನ್ನು ಹೊರಡಿಸಿದ್ದು, ಸಾರಿಗೆ ನಿಗಮಗಳ ಪುರುಷ ನೌಕರನಿಗೆ ಆತನ ಪತ್ನಿಯ ಹೆರಿಗೆ ಸಂದರ್ಭದಲ್ಲಿ, ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದೇಶದ ಮುಖ್ಯಾಂಶಗಳು:
ಇಲಾಖೆ: ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ.
ದಿನಾಂಕ: 27.10.2026.
ಅನ್ವಯವಾಗುವ ನಿಯಮಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ರಜಾ ನಿಯಮಗಳು, 1964ರ ನಿಯಮ 20ಎ ರಡಿ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ರಸ್ತೆ ಸಾರಿಗೆ ಸಂಸ್ಥೆಗಳ ಕಾಯ್ದೆ 1950ರ ಕಲಂ 45ರನ್ವಯ ಸರ್ಕಾರದ ಅನುಮೋದನೆ ನೀಡಲಾಗಿದೆ.
ರಜೆಯ ಅವಧಿ: ಪತ್ನಿಯ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ ಒಟ್ಟು 15 ದಿನಗಳು.
ಈ ಐತಿಹಾಸಿಕ ನಿರ್ಧಾರದಿಂದ ಸಾರಿಗೆ ನಿಗಮಗಳ ಸಾವಿರಾರು ಪುರುಷ ನೌಕರರಿಗೆ ತಮ್ಮ ಪತ್ನಿ ಮತ್ತು ನವಜಾತ ಶಿಶುವಿನ ಆರೈಕೆಗೆ ಅನುಕೂಲವಾಗಲಿದ್ದು, ನೌಕರರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಸಿಡಿಲು ಧ್ವನಿ ನ್ಯೂಸ್ ಬೆಂಗಳೂರು

