ಕೋಲಾರ :
ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಪಾರಂಡಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬರುವ ಕಾವೇರಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಸುಮಾರು ತಿಂಗಳುಗಳೇ ಕಳೆದಿರುತ್ತದೆ ಇದರ ಪರಿಣಾಮ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿಲ್ಲದೆ ಬೇರೆ ಬೇರೆ ಗ್ರಾಮಗಳಿಗೆ ನೀರು ತರಲು ಹೋಗಿ ಪರದಾಡುವಂತಾಗಿರುತ್ತದೆ ಇದರ ಬಗ್ಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಗೆ ಗ್ರಾಮಸ್ಥರ ದೂರಿನ ಮೇರೆಗೆ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ತ್ರಿಲೋಕ್ ಕೆ ಎಂ ರವರ ನೇತೃತ್ವದ ತಂಡ ದಿನಾಂಕ 06-07-2025 ರಂದು ಪಾರಂಡಹಳ್ಳಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಬೇಟಿ ಮಾಡಿ ಮನವಿಯನ್ನು ಸಲ್ಲಿಸಿರುತ್ತಾರೆ,

ಅವರ ಮನವಿಗೆ ಸ್ಪಂದಿಸಿದ PDO ರವರು ತಕ್ಷಣ ಸರಿಪಡಿಸಿ ಅನುಕೂಲ ಮಾಡಿಕೊಟ್ಟಿರುತ್ತಾರೆ, ಗ್ರಾಮಸ್ಥರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಹೋರಾಟಕ್ಕೆ ಶುಭ ಹಾರೈಸಿದ್ದಾರೆ

