ಬೆಂಗಳೂರು ; ಮೈಸೂರು ಮಹಾನಗರ ಪಾಲಿಕೆಯನ್ನು ಉನ್ನತ ದರ್ಜೆಗೆ ಏರಿಸಲು ಚಿಂತನೆ ನಡೆಸಿದ ಸರ್ಕಾರ ಇದೀಗ ಗ್ರೇಟರ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮಾಡಲು ರಾಜ್ಯಪಾಲರಿಂದ ಅಧಿಕೃತವಾಗಿ ಆದೇಶ ಹೊರಬಿದ್ದಿದೆ
ಇತ್ತೀಚಿಗಷ್ಟೇ ಬೆಂಗಳೂರು ಮಹಾನಗರ ಪಾಲಿಕೆ ಸಹ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಜಾರಿಗೆ ಬಂದ ಬೆನ್ನಲ್ಲೇ ಈಗ ಮೈಸೂರು ಸಹ ಗ್ರೇಟರ್ ಮೈಸೂರು ಪಾಲಿಕೆಯಾಗಿ ಸೇರ್ಪಡೆಯಾಗಿದೆ

ಜನವರಿ 8 ರಂದು ರಾಜ್ಯಪಾಲರು ಹೊರಡಿಸಿರುವ ಅಧಿಸೂಚನೆಯಲ್ಲಿ ಸಾರ್ವಜನಿಕರು ಸಾಧಕ ಬಾಧಕ ಅಹವಾಲು ಸಲ್ಲಿಸಲು 30 ದಿನಗಳು ಅವಕಾಶ ಕಲ್ಪಿಸಲಾಗಿದ್ದು ಬೆಂಗಳೂರಿನ ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಕಾರಣ ಸಹಿತ ವಿವರಣೆ ಮೂಲಕ ಅಭಿಪ್ರಾಯ ಸಲ್ಲಿಸಲು ತಿಳಿಸಿದೆ ಬಂದ ಅಹವಾಲು ಪರಿಶೀಲನೆ ನಡೆಸಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಿದೆ

ಈಗಾಗಲೇ ಇರುವ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 341.44 ಚದುರ ಕಿ. ಮೀ ವ್ಯಾಪ್ತಿಗೆ ವಿಸ್ತಾರ ಮಾಡಲಾಗಿದ್ದು ಹೂಟಗಳ್ಳಿ ನಗರಸಭೆ ಶ್ರೀ ರಾಮಪುರ ಕಡಕೋಳ ಬೋಗಾದಿ ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗಳು

ಸೇರ್ಪಡೆಗೊಂಡಿವೆ ಜೊತೆಗೆ ಚಾಮುಂಡಿಬೆಟ್ಟ ಗ್ರಾಮಪಂಚಾಯ್ತಿ ಆಲನಹಳ್ಳಿ ಗ್ರಾಮಪಂಚಾಯ್ತಿ ಆಲನಹಳ್ಳಿ ಹಾಗೂ ಲಲಿತಾದ್ರಿ ಪುರ ಗ್ರಾಮಗಳು ನಾಗವಾಲ ಇಲವಾಲ ಕರಕನಹಳ್ಳಿ ದನಗಳ್ಳಿ ಮಲ್ಲನಹಳ್ಳಿ ನಾಗನಹಳ್ಳಿ ಗ್ರಾಮ ಪಂಚಾಯ್ತಿಯ ಕೆಲ ಗ್ರಾಮಗಳನ್ನು ಈ ಗ್ರೇಟರ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿದೆ



