
🚨 ಶಿರಡಿ ಸಾಯಿ ಲೇಔಟ್ನಲ್ಲಿ ರಸ್ತೆ–ಚರಂಡಿ ಅವ್ಯವಸ್ಥೆ!
ಅಧಿಕಾರಿಗಳೇ… ಇನ್ನೆಷ್ಟು ದಿನ ಈ ನರಕಯಾತನೆ?
ಬೆಂಗಳೂರು | ಮಹದೇವಪುರ ಕ್ಷೇತ್ರ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ ಮಹದೇವಪುರ ಕ್ಷೇತ್ರದ ಹೂಡಿ ವಾರ್ಡ್ ಸಂಖ್ಯೆ 54ರ ಕೊಡಿಗೇಹಳ್ಳಿಯ ಶಿರಡಿ ಸಾಯಿ ಲೇಔಟ್ನಲ್ಲಿ ರಸ್ತೆ ಮತ್ತು ಚರಂಡಿ ಮೂಲಸೌಕರ್ಯ ಸಂಪೂರ್ಣ ಹದಗೆಟ್ಟಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರಮುಖ ವಸತಿ ರಸ್ತೆಗಳು ಹಾಗೂ ಸಂಪರ್ಕ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿವೆ. ದೊಡ್ಡ ದೊಡ್ಡ ಗುಂಡಿಗಳ ನಡುವೆ ವಾಹನ ಸಂಚಾರ ನಡೆಸುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.
ಇನ್ನು ಮಳೆ ಬಂದರೆ ಪರಿಸ್ಥಿತಿ ಮತ್ತಷ್ಟು ಭೀಕರ!
ರಸ್ತೆಯಲ್ಲಿರುವ ಗುಂಡಿಗಳು ನೀರಿನಿಂದ ತುಂಬಿಕೊಳ್ಳುವುದರಿಂದ ಅವು ಕಾಣದೆ ವಾಹನ ಸವಾರರು ಅಪಘಾತಕ್ಕೀಡಾಗುವ ಆತಂಕ ಎದುರಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಪ್ರತಿನಿತ್ಯ ಅಪಾಯದ ನಡುವೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
🚨 ಚರಂಡಿ ವ್ಯವಸ್ಥೆಯೂ ಸಂಪೂರ್ಣ ಹದಗೆಟ್ಟಿದೆ!
ರಸ್ತೆ ಬದಿಯ ಮಳೆನೀರು ಚರಂಡಿಗಳು ಹೂಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸದಿಂದ ಮುಚ್ಚಿಕೊಂಡಿವೆ. ಪರಿಣಾಮವಾಗಿ ಸಾಧಾರಣ ಮಳೆಯಾದರೂ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದೆ.
ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ನಿವಾಸಿಗಳನ್ನು ಕಾಡುತ್ತಿದೆ.
ಇಷ್ಟೇ ಅಲ್ಲದೆ, ಚರಂಡಿ ನೀರು ಮನೆಗಳ ಆವರಣ ಹಾಗೂ ಬೇಸ್ಮೆಂಟ್ ಪಾರ್ಕಿಂಗ್ ಪ್ರದೇಶಗಳಿಗೆ ನುಗ್ಗಿ ಮನೆಗಳು ಮತ್ತು ಸಾರ್ವಜನಿಕ–ಖಾಸಗಿ ಆಸ್ತಿಗಳಿಗೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
❓ ಅಧಿಕಾರಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ಏಕೆ ಇಲ್ಲ?
ಸ್ಥಳೀಯ ವಾರ್ಡ್ ಎಂಜಿನಿಯರ್ಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ಹಲವು ಬಾರಿ ತಂದಿದ್ದರೂ, ತಾತ್ಕಾಲಿಕ ಕಾಮಗಾರಿಗಳನ್ನು ಹೊರತುಪಡಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ನಿವಾಸಿಗಳ ಆರೋಪವಾಗಿದೆ.
ಹೀಗಾಗಿ ನಿವಾಸಿಗಳು ಇದೀಗ ಬೆಂಗಳೂರು ಅಭಿವೃದ್ಧಿ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರ ನೇರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

📢 ನಿವಾಸಿಗಳ ಪ್ರಮುಖ ಆಗ್ರಹಗಳು
🔹 ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು.
🔹 ಚರಂಡಿಗಳ ಹೂಳು ಹಾಗೂ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು.
🔹 ಹಾಳಾಗಿರುವ ಚರಂಡಿಗಳನ್ನು ಶಾಶ್ವತವಾಗಿ ದುರಸ್ತಿ ಮಾಡಬೇಕು.
🔹 ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಿ ಉತ್ತಮ ಗುಣಮಟ್ಟದ ಡಾಂಬರೀಕರಣ ಮಾಡಬೇಕು.
🔹 ಮಳೆನೀರು ಸರಾಗವಾಗಿ ಹರಿಯುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು.
🔹 ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.
ಜನರು ತೆರಿಗೆ ಪಾವತಿಸುತ್ತಿದ್ದಾರೆ… ಹಾಗಾದರೆ ಮೂಲಭೂತ ಸೌಲಭ್ಯಗಳು ಮಾತ್ರ ಏಕೆ ಸಿಗುತ್ತಿಲ್ಲ?
ಶಿರಡಿ ಸಾಯಿ ಲೇಔಟ್ನ ನಿವಾಸಿಗಳ ಬಹುಕಾಲದ ಸಮಸ್ಯೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಶಾಶ್ವತ ಪರಿಹಾರ ನೀಡುತ್ತಾರೆಯೇ? ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.
ಸಿಡಿಲು ಧ್ವನಿ ಡಿಜಿಟಲ್ ನ್ಯೂಸ್
ಜನರ ಧ್ವನಿ – ಸಮಸ್ಯೆಗಳ ನೇರ ವರದಿ
B.G ರಮೇಶ್ ಬೆಂಗಳೂರು

