ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿ ನಾಡಕಚೇರಿ ಮತ್ತು ಇತರೆ ಕಚೇರಿಗಳಿರುವ ಸರ್ಕಾರಿ ಭೂಮಿಗೆ ಒತ್ತುವರಿಯಾಗಿದೆ ಅದನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ತ್ರಿಲೋಕ್ ಅವರ ನೇತೃತ್ವದಲ್ಲಿ ಕ್ಯಾಸಂಬಳ್ಳಿ ನಾಡಕಚೇರಿಯ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತರು ಸರ್ವೇ ನಂ. 164ರಲ್ಲಿ ಸುಮಾರು 3 ಎಕರೆ ಸರ್ಕಾರಿ ಜಮೀನು ಇದ್ದು, ಅದರಲ್ಲಿ ವಿವಿಧ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಕಚೇರಿಗೆ ಎಷ್ಟು ವಿಸ್ತೀರ್ಣ ಜಮೀನು ಸೇರಿದೆ ಎಂಬುದನ್ನು ಸಂಪೂರ್ಣ ಮರುಸರ್ವೆ ನಡೆಸಿ ಗಡಿಕಲ್ಲುಗಳನ್ನು ನೆಟ್ಟು, ಸುತ್ತಲೂ ಕಾಂಪೌಂಡ್ ನಿರ್ಮಿಸಿ ಸರ್ಕಾರಿ ಜಮೀನನ್ನು ಸಂರಕ್ಷಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು

ಈ ಕಚೇರಿಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಹಲವಾರು ಬಾರಿ ಕಳ್ಳತನ ಸಂಭವಿಸಿರುವುದನ್ನು ನೆನಪಿಸಿದ ಕಾರ್ಯಕರ್ತರು ಸೂಕ್ತ ಭದ್ರತೆ ಮತ್ತು ಸಾರ್ವಜನಿಕ ದಾಖಲೆಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿದರು
ಈ ಕುರಿತು ಸಂಘಟನೆಯಿಂದ ಹಿಂದೆಯೂ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಲಾಗಿದೇ ಎಂದು ವಿಷಾದ ವ್ಯಕ್ತಪಡಿಸಿದರು

ಆದ್ದರಿಂದ ತಕ್ಷಣ ಎಚ್ಚೆತ್ತುಕೊಂಡು ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಕಚೇರಿಗಳನ್ನು ಜೊತೆಗೆ ಸಾರ್ವಜನಿಕ ದಾಖಲೆಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸಂಘಟನೆಯಿಂದ ಕಾನೂನುಬದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯಾದವ್ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಾರೆಡ್ಡಿ, ಮುನಿರತ್ನಪ್ಪ, ಅಶ್ವಥ್ ರೆಡ್ಡಿ ಹಾಗೂ ತಿಮ್ಮರಾಯಪ್ಪ ಉಪಸ್ಥಿತರಿದ್ದರು
.

