
ಮಂಗಳೂರು :
ಶ್ರೀಪ್ರಕಾಶ್ ಬಿನ್ ವಾಸು ಪೂಜಾರಿ ಇವರು ಸಲ್ಲಿಸಿರುವ ದೂರಿನ ಮೇರೆಗೆ ವಿಚಾರಣೆ ಮತ್ತು ತನಿಖೆ ನಡೆಸಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ದಕ್ಷಿಣ ಕನ್ನಡ ಜಿಲ್ಲೆ, ಪಂಚಾಯತ್ ರವರು ಸಲ್ಲಿರುವ ಪ್ರಸ್ತಾವನೆಯಲ್ಲಿ ಮೂಡಬಿದ್ರೆ ತಾಲ್ಲೂಕು ನೆಲ್ಲಿಕಾರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಶೀಲ ರವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಮಳೆ ನೀರು ಕೊಯ್ದು ಕಾಮಗಾರಿ, ನೆಲ್ಲಿಕಾರು ಗ್ರಾಮ ಪಂಚಾಯತ್ ಕಛೇರಿಯ ಬಳಿ ಇರುವ ಕೊಳವೆ ಬಾವಿಗೆ ಮರುಪೂರಣ ಘಟಕ ಹಾಗೂ ಮಳೆ ನೀರು ಕೊಯ್ಲು ಘಟಕ ಮತ್ತು ಮಾಂಟ್ರಾಡಿ ಗ್ರಾಮದ ಈಶ್ವರಬೆಟ್ಟುವಿನಿಂದ ಹಂಪೆಜಾಲು ತನಕ ಸಾರ್ವಜನಿಕ ತೋಡು ಹೂಳೆತ್ತುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವುದಾಗಿ ವರದಿ ಸಲ್ಲಿಸಿರುತ್ತಾರೆ

ಮುಂದುವರಿದು ಈ ಸಂಬಂಧ ನೆಲ್ಲಿಕಾರು ಪoಚಾಯಿತಿ ಉಪಾಧ್ಯಕ್ಷ ಸುಶೀಲ ಅವರಿಗೆ ನೋಟಿಸ್ ನೀಡಿದ ಮೇರೆಗೆ ಶ್ರೀಮತಿ ಸುಶೀಲ ರವರು ದಿನಾಂಕ:30.09.2025 ರಂದು ನೀಡಿರುವ ಲಿಖಿತ ಸಮಜಾಯಿಷಿಯನ್ನು ಹಾಗೂ ಕಡತದಲ್ಲಿನ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಪಂಚಾಯಿತಿಯ ಕಾಮಗಾರಿಗಳು ಪೂರ್ಣಗೊಂಡ ನಂತರ ಹಣ ಪಾವತಿ ಮಾಡುವುದು ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಂಟಿ ಜವಾಬ್ದಾರಿಯಾಗಿರುತ್ತದೆ.

ಆದರೆ, ಈ ಪ್ರಕರಣದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದ ಇದ್ದರೂ ಸಹ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಿ ಮಾಡಿ ಹಣ ಪಾವತಿ ಮಾಡಿರುವ ಆರೋಪಗಳು ವಿಚಾರಣೆಯಲ್ಲಿ ಸಾಬೀತಾಗಿರುತ್ತದೆ.

ಆದುದರಿಂದ, ಸದರಿಯವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 43(ಎ) (i) ಮತ್ತು (vi) 48 (4) ಹಾಗೂ (5)ರನ್ವಯ ಸದಸ್ಯತ್ವ/ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲು ಮತ್ತು ಅದೇ ಅಧಿನಿಯಮದ 43 (ಎ) (2) ರನ್ವಯ ಯಾವುದೇ ಪಂಚಾಯತ್ಗೆ ಮುಂದಿನ ಆರು (06) ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶಿಸಲು ಮತ್ತು ದುರುಪಯೋಗವಾದ ಮೊತ್ತ ರೂ.48,289/-ಗಳನ್ನು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ದಿನಾಂಕದಿಂದ ಶೇ.8ರ ಬಡ್ಡಿದರದೊಂದಿಗೆ ವಸೂಲಾತಿ ಮಾಡುವ ದಂಡನೆ ವಿಧಿಸಿ ಆದೇಶಿಸಲು ತೀರ್ಮಾನಿಸಿ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀಮತಿ ಸುಶೀಲ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಉಪಾದ್ಯಕ್ಷರು, ನೆಲ್ಲಿಕಾರು ಗ್ರಾಮ ಪಂಚಾಯಿತಿ, ಮೂಡಬಿದ್ರೆ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರು ಅಧಿಕಾರ ದುರುಪಯೋಗ ಮತ್ತು ಹಣ ದೂರುಪಯೋಗ ಪಡಿಸಿಕೊಂಡಿರುವ ಆರೋಪಗಳು ಸಾಬೀತಾಗಿರುವುದರಿಂದ, ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ-1993 ಪ್ರಕರಣ 43(ಎ) (i) ಮತ್ತು (vi), 48 (4) ಹಾಗೂ (5)ರನ್ವಯ ಸದಸ್ಯತ್ವ/ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದೆ ಮತ್ತು ಅದೇ ಅಧಿನಿಯಮದ 43 (ಎ) (2) ರನ್ವಯ ಯಾವುದೇ ಪಂಚಾಯತ್ಗೆ ಮುಂದಿನ ಆರು (06) ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶಿಸಿದೆ. ಹಾಗೂ ರೂ.48,289/-ಗಳನ್ನು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ದಿನಾಂಕದಿಂದ ಶೇ.8ರ ಬಡ್ಡಿದರದೊಂದಿಗೆ ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು-2006ರ ನಿಯಮ 111ರನ್ವಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಿರ್ಧರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 246(8)ರನ್ವಯ ವಸೂಲಿ ಮಾಡಲು ಕಾರ್ಯನಿರ್ವಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮೂಡಬಿದ್ರೆ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಕರ್ನಾಟಕ ರಾಜ್ಯಪಾಲ ಇವರ ಆದೇಶ ಅನುಸಾರ ಮತ್ತು ಅವರ ಹೆಸರಿನಲ್ಲಿ ಪೀಠಾಧಿಕಾರಿಯಾಗಿರುವ ಶ್ರೀ ಶಿವಕುಮಾರ್ ಅವರು ಆದೇಶಿಸಿರುತ್ತಾರೆ


