ತುಮಕೂರು ; ನೂರಾರು ದೇವರುಗಳ ಒಂದೆಡೆ ಸೇರಿಸಿ ಕುಣಿಗಲ್ ಉತ್ಸವ ಜರುಗಿತು
ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ರಂಗನಾಥ್ ಅವರ ನೇತೃತ್ವದಲ್ಲಿ ಇಂದು ಕುಣಿಗಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕಿನ ಅತ್ಯಂತ ವಿವಿಧ ಗ್ರಾಮಗಳಿಂದ ದೇವರುಗಳ ಕರೆಯಿಸಿ ನೂರಾರು ದೇವರುಗಳ ಅದ್ದೂರಿ ಮೆರವಣಿಗೆ ಜೊತೆಗೆ ಪಟ ಕುಣಿತ ಡೊಳ್ಳು ಕುಣಿತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮೆರಗು ನೀಡಿದವು ಎಲ್ಲಾ ದೇವರುಗಳ ಮೆರವಣಿಗೆಯ ನಂತರ ಪಟ್ಟಣದ ಜಿ ಕೆ ಬಿಎಮ್ಎಸ್ ಶಾಲಾ ಮೈದಾನದಲ್ಲಿ ಒಂದೆಡೆ ಸೇರಿದವು ಪಟ್ಟಣದ ನಾಗರಿಕರು ಸಾರ್ವಜನಿಕರು ಪೂಜಾ ಕೈಕಾರ್ಯಗಳಲ್ಲಿ ತೊಡಗಿದರು
ನಾಳೆ ಸಂಜೆ ತಿರುಪತಿಯ ವೈದಿಕರಿಂದ ಶ್ರೀನಿವಾಸ ಕಲ್ಯಾಣ ಜರುಗಲಿದ್ದು ತಿರುಪತಿ ಲಡ್ಡು ವಿತರಣೆ ಮಾಡಲಿದ್ದಾರೆ ಎಂದು ಶಾಸಕ ರಂಗನಾಥ್ ತಿಳಿಸಿದ್ದಾರೆ
ಕುಣಿಗಲ್ ತಾಲೂಕಿನ ಇತಿಹಾಸದಲ್ಲಿ ಇಂತಹ ಒಂದು ವೈಭವಯುತ ಕಾರ್ಯಕ್ರಮ ಹಿಂದೆಯೂ ನೋಡಿಲ್ಲ ಮುಂದೆಯೂ ನೋಡುವುದಿಲ್ಲ ಎಂಬುದಾಗಿ ಜನರ ಉದ್ಘಾಷಣೆಗಳು ಕಂಡುಬಂದವು


